-->
 ತಡರಾತ್ರಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

ತಡರಾತ್ರಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ


ಅಂಬಲಪಾಡಿ ಜಂಕ್ಷನ್ ಬಳಿ ತಡ ರಾತ್ರಿ ಅಸಹಾಯಕ ಸ್ಥಿತಿಯಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿಯವರು ಪೊಲೀಸರ ಸಹಾಯದಿಂದ ರಕ್ಷಿಸಿದ್ದಾರೆ. ಬಳಿಕ ಸಖಿ ಸೆಂಟರ್ ಗೆ ದಾಖಲಿಸಿದ ನಂತರ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಹಿಳೆ ತನ್ನ ಹೆಸರು ಕವಿತಾ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕಟಾವು ತಾಲೂಕಿನ ಪಚವಾಡ ಗ್ರಾಮದವಳೆಂದು ಮಾಹಿತಿ ನೀಡಿದ್ದಾರೆ. ಮಹಿಳೆಯ ಸಂಬOಧಿಕರು ಯಾರಾದರೂ ಇದ್ದರೆ ಜಿಲ್ಲಾ ಆಸ್ಪತ್ರೆ ಅಥವಾ ಸಖಿ ಸೆಂಟರ್ ಸಂಪರ್ಕಿಸುವOತೆ ವಿಶುಶೆಟ್ಟಿ ಮನವಿ ಮಾಡಿದ್ದಾರೆ. ರಕ್ಷಣಾ ಸಮಯದಲ್ಲಿ ನಗರ ಠಾಣೆಯ ಎಚ್ ಸಿ ರಮೇಶ್, ಶಶಿಕಾಂತ್ ಉಪಾಧ್ಯಾಯ, ಹರೀಶ್ ಉದ್ಯಾವರ ಸಹಕರಿಸಿದ್ದಾರೆ.


Ads on article

Advertise in articles 1

advertising articles 2

Advertise under the article