-->
 ಬೋಟಿನಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರ ನಾಪತ್ತೆ

ಬೋಟಿನಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರ ನಾಪತ್ತೆ


ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರರೊಬ್ಬರು ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದವರನ್ನು ನಾಗಲಿಂಗಮ್ (51) ಎಂದು ಗುರುತಿಸಲಾಗಿದೆ. ನಾಗಲಿಂಗಮ್ ಅವರು ಇಮ್ಯಾನುವೆಲ್ ಕಿರಣ ಎಂಬವರ ರಾಯಲ್ ಫಿಶರಿಶ್ ಎಂಬ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಜ.31ರಂದು ರಾತ್ರಿ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರ ಮಧ್ಯೆ ಬೋಟು ಹೋಗುತ್ತಿರುವಾಗ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 



 


Ads on article

Advertise in articles 1

advertising articles 2

Advertise under the article