-->
 ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ


ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಗತ್ಯ ಸೇವಾ ವಲಯಗಳಾದ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಪ್ರಾಮುಖ್ಯತೆ ನೀಡಿದ್ದು, ಶೇ.100 ಗ್ಯಾಸ್ ವಿತರಣೆಗೆ ಸೂಚನೆ ನೀಡಿದೆ. ನಾಳೆಯಿಂದಲೇ ಈ ನಿಯಮಗಳು ಜಾರಿಯಾಗಲಿವೆ.

ಹೋಟೆಲ್‌ಗಳಿಗೆ ಕೇವಲ 10% ಗ್ಯಾಸ್ ವಿತರಣೆಗೆ ಸೂಚಿಸಲಾಗಿದೆ. ನಾಳೆಯಿಂದ ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಪರ್ಸೆಂಟೇಜ್ ಗ್ಯಾಸ್ ವಿತರಿಸಬೇಕೆಂದು ಏಜೆನ್ಸಿ ಕಂಪನಿಗಳಿಗೆ ಸರ್ಕಾರ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಆಸ್ಪತ್ರೆ 100%, ಶಿಕ್ಷಣ ಸಂಸ್ಥೆಗಳಿಗೆ 100%, ಸೀಡ್ ಪ್ರೋಸೆಸಿಂಗ್ 70%, ಆಯಿಲ್ ಉತ್ಪಾದನೆ ಕಂಪನಿಗಳಿಗೆ 70%, ಏರ್ ಲೈನ್ಸ್, ರೈಲ್ವೆ 70%, ಇಂಡಸ್ಟ್ರೀಯಲ್ ಕ್ಯಾಂಟಿನ್ 10% ಗ್ಯಾಸ್, ಕಾರ್ಪೋರೇಟ್ ಗೆಸ್ಟ್ ಹೌಸ್ 10%, ಫುಡ್ ಪ್ರೋಸೆಸಿಂಗ್ ಕಂಪನಿ 10%, ವೃದ್ಧಾಶ್ರಮಗಳಿಗೆ 70% ಹಾಗೂ ಹೋಟೆಲ್ ಗಳಿಗೆ 10% ವಿತರಿಸಲು ಸೂಚಿಸಲಾಗಿದೆ. ಹೋಟೆಲ್ ಗಳು ಇಂದಿನಿಂದ ಕಮರ್ಷಿಯಲ್ ಗ್ಯಾಸ್ ಬುಕ್ ಮಾಡಬಹುದಾಗಿದೆ.






Ads on article

Advertise in articles 1

advertising articles 2

Advertise under the article