ಗ್ಯಾಸ್ ಬುಕ್ಕಿಂಗ್ ಹೆಸರಲ್ಲಿ ಸೈಬರ್ ವಂಚನೆ; ಸಾರ್ವಜನಿಕರು ಜಾಗೃತರಾಗಿರಬೇಕು- ಎಸ್ಪಿ ಹರಿರಾಂ(Video)
Wednesday, March 18, 2026
ಗ್ಯಾಸ್ ಅಭಾವವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಗ್ಯಾಸ್ ಬುಕ್ಕಿಂಗ್ ಅಥವಾ ಗ್ಯಾಸ್ ಸಿಲಿಂಡರ್ ಕೆವೈಸಿ ಅಪ್ಡೇಟ್ ಹೆಸರಲ್ಲಿ ಸೈಬರ್ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಅಪರಿಚಿತರು ಕಳಿಸುವ ಲಿಂಕ್, ಎಪಿಕೆ ಫೈಲ್ ಓಪನ್ ಮಾಡಿ ಮೋಸ ಹೋಗಬೇಡಿ. ಈಗಾಗಲೇ ಉಡುಪಿಯ ಇಬ್ವರು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಎಸ್ಪಿ ಅವರು ತಿಳಿಸಿದ್ದಾರೆ.