ಕುಕ್ಕಿಕಟ್ಟೆ-ಮುಚ್ಲುಕೋಡು ರಸ್ತೆಯ ಡ್ರೈನೇಜ್ ಸಮಸ್ಯೆಗೆ ಸ್ಪಂದಿಸಿದ ನಗರಾಡಳಿತ
Wednesday, March 18, 2026
ಉಡುಪಿಯ ಕುಕ್ಕಿಕಟ್ಟೆ ಮುಖ್ಯ ರಸ್ತೆಯಿಂದ ಮುಚ್ಲುಕೊಡು ದೇವಸ್ಥಾನ ಸಂಪರ್ಕಿಸುವ ರಸ್ತೆಯ ಬಳಿ ಮಳೆ ನೀರು ಹರಿಯುವ ಕಾಲುವೆಯಲ್ಲಿ ಡ್ರೈನೇಜ್ ನೀರು ಹರಿದು ಉಂಟಾಗುತ್ತಿದ್ದ ಸಮಸ್ಯೆಗೆ ನಗರಾಡಳಿತ ಸ್ಪಂದಿಸಿದೆ.
ಖಾಸಗಿ ಬಹುಮಹಡಿ ವಸತಿಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣದಲ್ಲಿ ಉತ್ಪತ್ತಿಯಾದ ತ್ಯಾಜ್ಯನೀರನ್ನು ಸಾರ್ವಜನಿಕ ಮಳೆ ನೀರು ಹರಿಯುವ ಕಾಲುವೆಯಲ್ಲಿ ಹರಿದು ಬಿಟ್ಟಿರುವುದನ್ನು ಕಂಡು ಹಿಡಿದ ನಗರಾಡಳಿತದವರು, ಡೈನೇಜ್ ನೀರುಬರುವ ನಳಿಕೆಗೆ ಮುಚ್ಚಳ ಅಳವಡಿಸಿದ್ದಾರೆ. ಕಳೆದ ಹಲವು ಸಮಯದಿಂದ ಈ ಭಾಗದಲ್ಲಿ ವಸತಿ ಸಮುಚ್ಚಯದ ಡ್ರೈನೇಜ್ ನೀರು ಮಳೆ ನೀರು ಹರಿಯುವ ಕಾಲುವೆಗೆ ಸಾಗಿ ಬಂದು, ಪರಿಸರವಿಡೀ ದುರ್ನಾತ ಬೀರುತ್ತಿತ್ತು.
ಈ ಸಮಸ್ಯೆಗೆ ತಕ್ಷಣ ಸ್ಪಂಧಿಸಬೇಕೆOದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಹಾಗೂ ಸ್ಥಳೀಯರು ಒತ್ತಾಯಿಸಿದ್ದರು. ಇದೀಗ ಸಮಸ್ಯೆಗೆ ನಗರಾಡಳಿತ ಅಧಿಕಾರಿಗಳು ಸ್ಪಂದಿಸಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.
.jpeg)
.jpeg)
