ಸಮಾಜ ಸೇವಕ ವಿಶುಶೆಟ್ಟಿಗೆ ತುಳುನಾಡ ಐಸಿರಿ ಪ್ರಶಸ್ತಿ
Tuesday, March 31, 2026
ಮುಂಬೈ ನಾಲಾ ಸೋಪಾರದಲ್ಲಿ ತುಳುಕೂಟ ಆಯೋಜಿಸಿರುವ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿಯವರಿಗೆ 2026ರ ತುಳುನಾಡ ಐಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷರಾದ ಶಶಿಧರ ಕೆ.ಶೆಟ್ಟಿ ಇನ್ನಂಜೆ ಹಾಗೂ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಯಶೋಧ ಎಸ್ ಕೊಟ್ಯಾನ್ ಹಾಗೂ ಗೌರವಾನ್ವಿತರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯೊಂದಿಗೆ ರೂ. 25,000 ಗೌರವ ಧನ ನೀಡಲಾಗಿದೆ. ವಿಶುಶೆಟ್ಟಿಯವರು ಸನ್ಮಾನದ ಹಣ ನೊಂದ ಅಸಹಾಯಕ ಮಹಿಳೆಯರಿಗೆ ನೀಡುತ್ತಿದ್ದು, ಈ ಬಾರಿ ಬನ್ನಂಜೆಯ ದಲಿತ ಮಹಿಳೆ ಶಕುಂತಳಾ ಅವರ ಪತಿಯ ಚಿಕಿತ್ಸೆಗೆ 20,000 ರೂ. ಹಾಗೂ 5000 ರೂ. ಬಾಲಕಿ ಕಾಪು ಹಿಮಾನಿ ಶೆಟ್ಟಿಯ ಚಿಕಿತ್ಸೆಗೆ ನೀಡಿ ಸಹಕರಿಸಿದರು.