-->
 ತಲೆನೋವಿಗೆಂದು ಔಷಧಿ ಸೇವಿಸಿದ್ದ ಬಾಲಕ ಮೃತ್ಯು

ತಲೆನೋವಿಗೆಂದು ಔಷಧಿ ಸೇವಿಸಿದ್ದ ಬಾಲಕ ಮೃತ್ಯು


ತಲೆನೋವಿಗೆಂದು ಮನೆಯಲ್ಲಿದ್ದ ಔಷಧ ಸೇವಿಸಿದ್ದ 10 ವರ್ಷದ ಬಾಲಕ ಮೃತಪಟ್ಟ ಘಟನೆ ತಾಲೂಕಿನ ರಾಮಕುಂಜ ಗ್ರಾಮದ ಕೊಂಡ್ಯಾಡಿ ಎಂಬಲ್ಲಿ ನಡೆದಿದೆ. 

ಕೊಂಡ್ಯಾಡಿ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ ರಾಮಕುಂಜದ ಖಾಸಗಿ ಶಾಲಾ 5ನೇ ತರಗತಿ ವಿದ್ಯಾರ್ಥಿ ಚಿರಾಗ್ ಎಸ್. (10) ಮೃತ ದುರ್ದೈವಿ. ಬಾಲಕನಿಗೆ ಪದೇ ಪದೆ ತಲೆನೋವು ಕಾಣಿಸಿಕೊಳ್ಳುತ್ತಿದ್ದು, ಮಾ. 18 ರಂದು ಸಂಜೆ ತಲೆನೋವಿಗೆಂದು ಮನೆಯಲ್ಲಿದ್ದ ಔಷಧ ಸೇವಿಸಿದ್ದ. ಬಳಿಕ ಮನೆಯಲ್ಲಿ ಬಾಲಕ ಹೊರಳಾಡುತ್ತಿರುವುದನ್ನು ಕಂಡ ಬಾಲಕನ ತಾಯಿ ಕೂಡಲೇ ತನ್ನ ಪತಿಗೆ ತಿಳಿಸಿದ್ದಾರೆ.

ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಬಾಲಕ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬAಧ ಸಂಜೀವ ಪೂಜಾರಿ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


Ads on article

Advertise in articles 1

advertising articles 2

Advertise under the article