ರಸ್ತೆ ಬದಿಯಲ್ಲಿ ಗಾಯಗೊಂಡು ನರಳಾಡುತ್ತಿದ್ದ ಹೆಬ್ಬಾವಿನ ರಕ್ಷಣೆ (Video)
Saturday, March 21, 2026
ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಅಟೋ ಸ್ಟ್ಯಾಂಡ್ ಹತ್ತಿರ ಗಾಯಗೊಂಡು ನರಳಾಡುತ್ತಿದ್ದ ಹೆಬ್ಬಾವನ್ನು ರಕ್ಷಿಸಲಾಗಿದೆ.
ರೈಲ್ವೆ ಪ್ರಯಾಣಿಕರ ಸಂಚಾರ ಇರುವ ಸ್ಥಳದಲ್ಲಿ ಹೆಬ್ಬಾವಿನ ಚಲನವಲನವನ್ನು ಗಮನಿಸಿದ, ಅಟೋ ಚಾಲಕ ಪ್ರಶಾಂತ್ ಎನ್ನುವರು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದ್ದರು. ತಕ್ಷಣ ಸ್ಪಂದಿಸಿದ ಒಳಕಾಡು ಅವರು, ಹಾವು ಹಿಡಿಯುವ ಪರಿಣಿತಿ ಹೊಂದಿರುವ ಅಟೋಚಾಲಕ ಬಶೀರ್ ಎನ್ನುವರನ್ನು ಸ್ಥಳಕ್ಕೆ ಕರಿಸಿದ್ದಾರೆ. ಹೆಬ್ಬಾವನ್ನು ರಕ್ಷಿಸಿ ಚಿಕಿತ್ಸೆ ನೀಡಿದ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.