-->
ಉಡುಪಿ ಶ್ರೀಕೃಷ್ಣಮಠದಲ್ಲಿ ಮೇಲ್ಛಾವಣಿ,  ಸರತಿ ಸಾಲು, ಐಡಿ ಆಧಾರಿತ ಎಂಟ್ರೆನ್ಸ್ ವ್ಯವಸ್ಥೆ ಉದ್ಘಾಟನೆ

ಉಡುಪಿ ಶ್ರೀಕೃಷ್ಣಮಠದಲ್ಲಿ ಮೇಲ್ಛಾವಣಿ, ಸರತಿ ಸಾಲು, ಐಡಿ ಆಧಾರಿತ ಎಂಟ್ರೆನ್ಸ್ ವ್ಯವಸ್ಥೆ ಉದ್ಘಾಟನೆ


ಉಡುಪಿ ಶ್ರೀ ಕೃಷ್ಣ ಮಠದ ರಥಬೀದಿ - ರಾಜಾಂಗಣ ರಾಜಮಾರ್ಗದಲ್ಲಿ ನೂತನವಾಗಿ ನವೀಕರಿಸಲಾದ ಶ್ರೀ ಕೃಷ್ಣ ದರ್ಶನಕ್ಕಾಗಿ ಸರತಿ ಸಾಲು ವ್ಯವಸ್ಥೆ ಮತ್ತು ಮೇಲ್ಛಾವಣಿ ವ್ಯವಸ್ಥೆ ಹಾಗೂ ವಿ ಐ ಪಿ ದರ್ಶನಕ್ಕಾಗಿ ಹಾಗೂ ಸ್ಥಳೀಯ ಭಕ್ತರಿಗಾಗಿ ಐ ಡಿ ಆಧಾರಿತ ಎಂಟ್ರೆನ್ಸ್ ವ್ಯವಸ್ಥೆಯನ್ನು ಪರ್ಯಾಯ  ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು. 


ಈ ಸಂದರ್ಭದಲ್ಲಿ  ಕೃಷ್ಣಾಪುರ ಮಠಾಧೀಶರಾದ  ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. 




ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಹಾಗೂ ಉಭಯ ಮಠಗಳ ಶಿಷ್ಯ ವರ್ಗದವರು ಭಾಗವಹಿಸಿದ್ದರು. 

Ads on article

Advertise in articles 1

advertising articles 2

Advertise under the article