-->
ಕೊಳಲಗಿರಿಯಲ್ಲಿ ಪಿಂಕ್ ಸೂಪರ್ ಮೂನ್ ವೀಕ್ಷಣೆ

ಕೊಳಲಗಿರಿಯಲ್ಲಿ ಪಿಂಕ್ ಸೂಪರ್ ಮೂನ್ ವೀಕ್ಷಣೆ


ವಸಂತ ಋತುವಿನ ವಿಶೇಷ ಖಗೋಳ ವಿಸ್ಮಯ ಪಿಂಕ್ ಸೂಪರ್ ಮೂನ್ ವೀಕ್ಷಣಾ ಕಾರ್ಯಕ್ರಮವು ಕೊಳಲಗಿರಿಯಲ್ಲಿ ನಡೆಯಿತು. ಸಾಮಾನ್ಯ ದಿನಗಳಿಗಿಂತ ಸುಮಾರು 30 ಶೇಕಡಾ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡ ಚಂದ್ರನ ದರ್ಶನಕ್ಕೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.


ಬ್ಯಾಂಕ್ ಆಫ್ ಬರೋಡ ಸಮೀಪದ ಮಂಜುನಾಥ್ ಕುಲಾಲ್ ಅವರ ನಿವಾಸದ ತಾರಸಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಫ್ರಾಂಕಿ ಡಿಸೋಜ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತುಳುನಾಡಿನ ಪ್ರತಿಭಾವಂತ ಖಗೋಳಾಸಕ್ತಿ ವ್ಯಕ್ತಿ ಆರ್. ಮನೋಹರ್ ಅವರ ಸಾಧನೆಯನ್ನು ಮೆಚ್ಚಿ, ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ದೂರದರ್ಶಕದ ಮೂಲಕ ಜನರಿಗೆ ಪಿಂಕ್ ಸೂಪರ್ ಮೂನ್ ಅನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.


ಈ ವೇಳೆ ಸ್ಥಳೀಯ ಸಮಾಜಸೇವಕರು, ಗಣ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ದೂರದರ್ಶಕದ ಮೂಲಕ ಚಂದ್ರನನ್ನು ಹತ್ತಿರದಿಂದ ವೀಕ್ಷಿಸಿ ಕಣ್ತುಂಬಿಕೊಂಡರು. 

ಕಾರ್ಯಕ್ರಮದಲ್ಲಿ ಪ್ರಕಾಶ್ ಭಂಡಾರಿ, ಜಯಶೆಟ್ಟಿ, ಸುರೇಂದ್ರ ಪೂಜಾರಿ, ರತ್ನಾಕರ ಮೊಗವೀರ, ತೌಡ ಪೂಜಾರಿ, ಸುಂದರ ಪೂಜಾರಿ, ಉಪನ್ಯಾಸಕ ರಾಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟಕರಾಗಿ ಗಣೇಶ್ ರಾಜ್ ಸರಳಬೆಟ್ಟು ಹಾಗೂ ತಂಡ ಕಾರ್ಯನಿರ್ವಹಿಸಿದರು.

Ads on article

Advertise in articles 1

advertising articles 2

Advertise under the article