-->
ನಾಪತ್ತೆಯಾಗಿದ್ದ ಉಪನ್ಯಾಸಕನ ಶವ ಬಾವಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಉಪನ್ಯಾಸಕನ ಶವ ಬಾವಿಯಲ್ಲಿ ಪತ್ತೆ


ಕೆಲ ದಿನಗಳ ಹಿಂದೆ  ನಾಪತ್ತೆಯಾದ ಉಪನ್ಯಾಸಕರೊಬ್ಬರ ಶವ ಮನೆ‌ ವಠಾರದ ಬಾವಿಯಲ್ಲಿ ಇಂದು ಪತ್ತೆಯಾಗಿದೆ. 

ಶಿರಸಿ ಮೂಲದ ಉಪನ್ಯಾಸಕ, ಗಣಪತಿ ಭಟ್ (55ವ) ಮೃತಪಟ್ಟವರು. ಅವಿವಾಹಿತರಾಗಿದ್ದ ಗಣಪತಿ ಭಟ್ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂ.ಜಿ.ಎಂ ಕಾಲೇಜಿನ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ನಾಪತ್ತೆಯಾದ ಬಗ್ಗೆ ನಗರ ಪೋಲಿಸ್ ಠಾಣೆಯ‌ಲ್ಲಿ ಪ್ರಕರಣ ದಾಖಲಾಗಿತ್ತು.  ಇದೀಗ ಬಾವಿಯಲ್ಲಿ ಶವ ಪತ್ತೆಯಾಗಿದ್ದು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 

ಅಗ್ನಿ ಶಾಮಕ ದಳದ ನೆರವಿನಿಂದ ಶವವನ್ನು ಮೇಲಕೆತ್ತಾಲಾಯಿತು. ನಗರ ಪೋಲಿಸ್ ಠಾಣೆಯ ಎಸ್ ಐ ನಾರಾಯಣ, ಗಣೇಶ ಡಿ, ತನಿಖಾ ಸಹಾಯಕ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.



Ads on article

Advertise in articles 1

advertising articles 2

Advertise under the article