ಅಲೆವೂರಿನಲ್ಲಿ 9ನೇ ಸುತ್ತಿನ ಕಾಲು ಬಾಯಿ ರೋಗ ನಿವಾರಣಾ ಲಸಿಕಾ ಕಾರ್ಯಕ್ರಮ
Saturday, April 25, 2026
ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘ, ಪಶುಪಾಲನಾ ಇಲಾಖೆ ಮತ್ತು ದ .ಕ ಹಾಲು ಒಕ್ಕೂಟ ನಿಯಮಿತ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ 9ನೇ ಸುತ್ತಿನ ಕಾಲು ಬಾಯಿ ರೋಗ ನಿವಾರಣಾ ಲಸಿಕಾ ಕಾರ್ಯಕ್ರಮದ ಅಭಿಯಾನವು ಅಲೆವೂರು ಕರ್ವಾಲಿನ ಸಂಜೀವಿ ನಾಯ್ಕ್ ಅವರ ಮನೆ ವಠಾರದಲ್ಲಿ ಜರಗಿತು.
ಅಲೆವೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಅಲೆವೂರು ಹರೀಶ್ ಕಿಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಅಭಿಯಾನವನ್ನು ದ.ಕ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ದ.ಕ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಅಲೆವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯಕ್ರಮಕ್ಕೆ ಆಗಮಿಸಿದ ಕೊಡವೂರು ರವಿರಾಜ್ ಹೆಗ್ಡೆ ಅವರನ್ನು ಹಾಲು ಉತ್ಪಾದಕರ ಪರವಾಗಿ ಸನ್ಮಾನಿಸಲಾಯಿತು.
ಡಾ॥ಪ್ರಶಾಂತ್, ಡಾ ॥ಅರುಣ್, ಕೋರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮಿ, ಮರ್ಣೆ-ಕನರಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕರುಣಾಕರ್ ಕರ್ಕೇರ, ಅಲೆವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಉಮೇಶ್ ಕಾಮತ್, ಸತೀಶ್ ಪೂಜಾರಿ, ಸ್ವಾತಿ ಪ್ರಭು, ಸುನಂದಾ ಶಂಕರ್ ಕೃಷ್ಣ ಅಸ್ಕೇಕಾರ್, ವಿದ್ಯಾ ದೇವೇಂದ್ರ ನಾಯ್ಕ್ ಉಪಸ್ಥಿತರಿದ್ದರು
ಡಾ ॥ಸಂದೀಪ್ ಸ್ವಾಗತಿಸಿ, ರಜನೀಶ್ ನಾಯಕ್ ವಂದಿಸಿದರು.

.jpeg)

.jpeg)
