-->
ವಿದ್ಯುತ್ ಆಘಾತ: ಬಾಲಕ ಮೃತ್ಯು

ವಿದ್ಯುತ್ ಆಘಾತ: ಬಾಲಕ ಮೃತ್ಯು


ವಿದ್ಯುತ್ ಆಘಾತದಿಂದ ಬಾಲಕನೊರ್ವ ಮೃತಪಟ್ಟ ಘಟನೆ ಪುತ್ತೂರಿನ ಗಡಿಯಾರ ಎಂಬಲ್ಲಿ ನಡೆದಿದೆ. ನೇರಳಕಟ್ಟೆ ಸಮೀಪದ ಕೊಡಾಜೆ ನಿವಾಸಿ ಶಹೀರ್ (15) ಮೃತಪಟ್ಟ ಬಾಲಕ.

ನೇರಳಕಟ್ಟೆ ಸಮೀಪದ ಗಣೇಶ ನಗರದ ಪ್ಲಾಟ್ ನಲ್ಲಿ ಬಾಡಿಗೆ ಮನೆಯಲ್ಲಿರುವ ಶರೀಫ್ ಅವರ ಪುತ್ರ ಶಹೀ‌ರ್ ಅವರು ಶಾಲೆಗೆ ರಜೆಯಾಗಿದ್ದರಿಂದ ಗಡಿಯಾರದಲ್ಲಿರುವ ಅಜ್ಜನ ಮನೆಗೆ ಆಗಮಿಸಿದ್ದರು . ಬೆಳಿಗ್ಗೆ ಶಹೀ‌ರ್ ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಈತ ಪುತ್ತೂರು ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article