-->
ಮೂಡುಸಗ್ರಿ ನಾಗಬನದಲ್ಲಿ ಗಿಡ ನೆಡುವ ಅಪೂರ್ವ ಕಾರ್ಯಕ್ರಮ

ಮೂಡುಸಗ್ರಿ ನಾಗಬನದಲ್ಲಿ ಗಿಡ ನೆಡುವ ಅಪೂರ್ವ ಕಾರ್ಯಕ್ರಮ


ಸುಮಾರು ಒಂದು ಸಾವಿರ ವರ್ಷಗಳ ಹಳೆಯ ಮೂಡುಸಗ್ರಿಯ ಶ್ರೀ ನಾಗ ಬ್ರಹ್ಮ ಸ್ಥಾನದಲ್ಲಿ ಸುಮಾರು 51 ಜಾತಿಯ ವಿವಿಧ ಗಿಡಗಳನ್ನು ನಾಗಬ್ರಹ್ಮ ಅಭಿವೃದ್ಧಿ ಸಮಿತಿ ವತಿಯಿಂದ ನಮ್ಮ ಮನೆ ನಮ್ಮ ಮರ ತಂಡದ ಸಹಕಾರದೊಂದಿಗೆ ನೆಡಲಾಯಿತು.

ಇತ್ತೀಚಿಗಿನ ದಿನಗಳಲ್ಲಿ ಕಾಂಕ್ರೀಟೀಕರಣ ಕೊಳ್ಳುತ್ತಿರುವ ನಾಗ ಬನಗಳ ಮಧ್ಯೆ ಈ ವಿಶೇಷ ನಾಗಬನ ಎಲ್ಲರಿಗೂ ಮಾದರಿಯಾಗಿದೆ .

ಈ ರೀತಿಯ ವಿನೂತನ ಮಾದರಿ ಕಾರ್ಯಕ್ರಮ ಸಂಯೋಜಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಖ್ಯಾತ ಉರಗತಜ್ಞ ಗುರುರಾಜ್ ಸನಿಲ್ ಹೇಳಿದರು.

ಸಮಿತಿಯ ಅಧ್ಯಕ್ಷ ವಿಷ್ಣು ಪ್ರಸಾದ್ ತೆಂಕಿಲ್ಲಾಯ, ಶ್ರೀನಿವಾಸ , ಸಮಿತಿಯ ಪದಾಧಿಕಾರಿಗಳು , ವಿಜಯ್ ಕೊಡವೂರು,ಕಸಾಪ ಉಡುಪಿ ತಾಲೂಕು  ರವಿರಾಜ್ ಹೆಚ್.ಪಿ, ಜನಾದ೯ನ್ ಕೊಡವೂರು, ಮಂಜುಳಾ ಪ್ರಸಾದ್, ಸಂದೀಪ್ ಮoಜ, ಕಾವ್ಯವಾಣಿ ಕೊಡಗು, ಉದಯ ನಾಯ್ಕ್, ರಾಘವೇಂದ್ರ ಕವಾ೯ಲು ಮುಂತಾದವರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article