ಲಯನ್ಸ್ ಜಿಲ್ಲಾ ದ್ವಿತೀಯ ಉಪ ಜಿಲ್ಲಾ ಗವರ್ನರ್ ಆಗಿ ಇಂಜಿನಿಯರ್ ರಮಾನಂದ್ ಗೆಲುವು
Sunday, April 26, 2026
ಲಯನ್ಸ್ ಜಿಲ್ಲೆ 317 ಸಿಯ 2026-27ನೇ ಸಾಲಿನ ದ್ವಿತೀಯ ಉಪ ಜಿಲ್ಲಾ ಗವರ್ನರ್ ಹುದ್ದೆಗೆ ಶನಿವಾರ ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ ಕುಂದಾಪುರ ಕ್ಲಬ್ಬಿನ ಪ್ರತಿನಿಧಿ ಇಂಜಿನಿಯರ್ ರಮಾನಂದ ಕೆ. ಅವರು 45 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ರಮಾನಂದ್ ಕೆ. ಅವರು 107 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಉಡುಪಿಯ ಉದ್ಯಮಿ ರಂಜನ್ ಕಲ್ಕೂರಾ ಅವರು 62 ಮತಗಳನ್ನು ಪಡೆದರು.
ಇದೇ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಉಪ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಅವರು 2026-27ನೇ ಸಾಲಿಗೆ ಜಿಲ್ಲಾ ಗವರ್ನರ್ ಆಗಿಯೂ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಅವರು 2026-27ನೇ ಸಾಲಿಗೆ ಪ್ರಥಮ ಉಪ ಜಿಲ್ಲಾ ಗವರ್ನರ್ ಆಗಿ ಪದೋನ್ನತಿ ಹೊಂದಿದರು.
ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಫಲಿತಾಂಶವನ್ನು ಪ್ರಕಟಿಸಿದರು.
