ಮಣಿಪಾಲದಲ್ಲಿ ವ್ಯಕ್ತಿಯ ಅಪಹರಣ
Thursday, April 02, 2026
ಮಣಿಪಾಲ ಆಸ್ಪತ್ರೆ ಬಳಿಯ ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುತ್ತಿದ್ದ ವ್ಯಕ್ತಿಯೋರ್ವರನ್ನು ಅಪಹರಿಸಿರುವ ಬಗ್ಗೆ ದೂರು ದಾಖಲಾಗಿದೆ.
ಕೊಡ್ಲಾಡಿ ಗ್ರಾಮದ ರಾಮ ಮಡಿವಾಳ ಅವರು ತನ್ನ ಸಹೋದರ ಲಕ್ಷ್ಮಣ ಅವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆ ಹೊರಬದಿಯ ಕ್ಯಾಂಟೀನ್‌ಲ್ಲಿ ಇನ್ನೋರ್ವ ಸಹೋದರ ರಾಜೇಶ್ ಮತ್ತು ಸುಧೀರ್ ಜತೆ ಚಹಾ ಕುಡಿಯುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಕಾರಿನಲ್ಲಿ ಬಂದ ಏಳೆಂಟು ಮಂದಿ ರಾಜೇಶ್ ಅವರನ್ನು ಏಕಾಏಕಿ ಹಿಡಿದು ಕಾರಿನಲ್ಲಿ ಮಣಿಪಾಲದಿಂದ ಹಿರಿಯಡಕ ಕಡೆ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ಬಂದ ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವರ್ ಮತ್ತು ವಿಜಯ್ ಅವರು ರಾಜೇಶ್ ಜತೆ ಈ ಹಿಂದೆ ವ್ಯವಹಾರದ ವಿಷಯದಲ್ಲಿ ಹುಡುಕಿಕೊಂಡು ಮನೆಗೆ ಬಂದಿದ್ದರು ಎನ್ನಲಾಗಿದೆ.
ಅವರೊಂದಿಗಿನ ತೆಲಂಗಾಣದಲ್ಲಿರುವ ವ್ಯವಹಾರದ ವಿಷಯದಲ್ಲಿ ಸಹೋದರನ್ನು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವ ಬಗ್ಗೆ ರಾಮ ಮಡಿವಾಳ ಅವರು ಮಣಿಪಾಲ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.