-->
 ವಾರೀಸುದಾರರಿಲ್ಲದ ಅಪರಿಚಿತ ಶವದ ಅಂತ್ಯ ಸಂಸ್ಕಾರ (Video)

ವಾರೀಸುದಾರರಿಲ್ಲದ ಅಪರಿಚಿತ ಶವದ ಅಂತ್ಯ ಸಂಸ್ಕಾರ (Video)


ಉಡುಪಿ ಜಿಲ್ಲೆಯ ಮೂಡ ನಿಡಂಬೂರು ಗ್ರಾಮದ ಆದಿ ಉಡುಪಿಯ ಪಾಳುಬಿದ್ದ ಬಾವಿಯಲ್ಲಿ ಪತ್ತೆಯಾದ ಅಪರಿಚಿತ ಶವದ ವಾರೀಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ದಫನ ಮಾಡಲಾಯಿತು. 

ಆದಿ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಹಿಂಭಾಗ ಖಾಸಗಿಯವರ ಸ್ಥಳದಲ್ಲಿದ್ದ ಪಾಳುಬಾವಿಯಲ್ಲಿ  ಕೊಳತ ಶವ ಪತ್ತೆಯಾಗಿತ್ತು, ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿ ಇಡಲಾಗಿತ್ತು,ಕಾನೂನು ಪ್ರಕ್ರಿಯೆ ನಡೆಸಿದ ನಂತರ ವಾರಸುದಾರರು ಬಾರದ ಕಾರಣ ಶವವನ್ನು  ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೇತ್ರತ್ವದಲ್ಲಿ ನಗರ ಠಾಣೆಯ ಪೊಲೀಸ್ ಅಧಿಕಾರಿಯವರ ಸಹಕಾರದಿಂದ  ಬಿಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ದಪನ ಮಾಡಲಾಯಿತು. ನಗರ ಠಾಣೆಯ ಎಸ್ ಐ ಹರೀಶ್, ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ವಿಕಾಸ್ ಶೆಟ್ಟಿ, ಪ್ಲವರ್ ವಿಷ್ಣು, ಸತೀಶ್ ಕುಮಾರ್, ನಗರ ಸಭೆ , ಜಿಲ್ಲಾಸ್ಪತ್ರೆ ಯವರು ಸಹಕರಿಸಿದರು.



Ads on article

Advertise in articles 1

advertising articles 2

Advertise under the article