ಕೊಡವೂರು ಮಹಾರುದ್ರ ಯಾಗ: ಮೇ 14ರಿಂದ 19ರವರೆಗೆ ಸಂಕಲ್ಪ ಸಮಯ ನಿಗದಿ
Tuesday, May 12, 2026
ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ಸನ್ನಿಧಾನದಲ್ಲಿ ಅಪರೂಪದ ಮಹಾ ರುದ್ರಯಾಗ ಮೇ 14ರಿಂದ ಆರಂಭವಾಗಿ ಮೇ 19ರಂದು ಸಂಪನ್ನಗೊಳ್ಳಲಿದೆ. ಮೇ 15ರಿಂದ ಮೇ. 19ರವರೆಗೆ ಮಹಾ ರುದ್ರ ಯಾಗ ಸಂಕಲ್ಪದೊಂದಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಸಂಕಲ್ಪದ ಸಮಯವನ್ನು ಆಯೋಜಕರು ತಿಳಿಸಿದ್ದಾರೆ.
ಮೇ 15ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ, ಮೇ. 16, 17, 18 ರಂದು ಬೆಳಗ್ಗೆ 8.30ಯಿಂದ ಸಂಜೆ 6 ರವರೆಗೆ ಹಾಗೂ ಮೇ. 19ರಂದು ಬೆಳಗ್ಗೆ 7 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಸಂಕಲ್ಪ ಮಾಡುವ ಸಮಯವನ್ನು ನೀಡಿದ್ದಾರೆ. ಭಕ್ತರು ಈ ಸ್ಪಂಧಿಸುವಂತೆ ಮಹಾರುದ್ರ ಯಾಗ ಸಮಿತಿ ತಿಳಿಸಿದೆ.