-->
ಮದ್ಯಪ್ರಿಯರಿಗೆ ಶಾಕ್: ತಮಿಳಿನಾಡಿನಲ್ಲಿ 717 ಮದ್ಯದಂಗಡಿ ಮುಚ್ಚಲು ಆದೇಶ

ಮದ್ಯಪ್ರಿಯರಿಗೆ ಶಾಕ್: ತಮಿಳಿನಾಡಿನಲ್ಲಿ 717 ಮದ್ಯದಂಗಡಿ ಮುಚ್ಚಲು ಆದೇಶ


ತಮಿಳುನಾಡು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ದಳಪತಿ ವಿಜಯ್ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ. ರಾಜ್ಯದಾದ್ಯಂತ ಇರುವ 717 ಸರ್ಕಾರಿ ಸ್ವಾಮ್ಯದ TASMAC ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ. 

ಧಾರ್ಮಿಕ ಸ್ಥಳಗಳು (ದೇವಸ್ಥಾನ, ಚರ್ಚ್, ಮಸೀದಿ), ಶಿಕ್ಷಣ ಸಂಸ್ಥೆಗಳು (ಶಾಲೆ-ಕಾಲೇಜು) ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ತಕ್ಷಣವೇ ತೆರವುಗೊಳಿಸಬೇಕಿದೆ. ಮುಂದಿನ ಎರಡು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಗಡುವು ನೀಡಲಾಗಿದೆ.

ತಮಿಳುನಾಡಿನಲ್ಲಿ ಶಾಲೆ ಮತ್ತು ದೇವಸ್ಥಾನಗಳ ಹತ್ತಿರವಿರುವ ಮದ್ಯದ ಅಂಗಡಿಗಳನ್ನು ತೆಗೆದುಹಾಕಬೇಕೆಂದು ಜನರು ದಶಕಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಡಿಎಂಕೆ  ಮತ್ತು ಎಐಎಡಿಎಂಕೆ  ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮದ್ಯಪಾನ ನಿಷೇಧದ ಭರವಸೆ ನೀಡಿದ್ದರೂ, ಆದಾಯದ ಕಾರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ. ವಿಜಯ್ ಈಗ ಅಧಿಕಾರಕ್ಕೆ ಬರುತ್ತಲೇ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article