ಕರ್ನಾಟಕದಲ್ಲೂ ಇನ್ಮುಂದೆ ಮದ್ಯ ದುಬಾರಿ
Tuesday, May 12, 2026
ಕರ್ನಾಟಕದಲ್ಲಿ ಹೊಸ ಅಬಕಾರಿ ನೀತಿಯಡಿ ಮದ್ಯದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಬ್ರಾಂಡಿ, ಬಿಯರ್, ವಿಸ್ಕಿ ಸೇರಿದಂತೆ ವಿವಿಧ ಮದ್ಯಗಳ ದರ ದುಬಾರಿಯಾಗಿದೆ.
ಮದ್ಯದಲ್ಲಿರುವ ಆಲ್ಕೋ ಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ ಮಾದರಿಯನ್ನು ಅಳವಡಿಸಿಕೊಂಡಿದೆ. ಕಡಿಮೆ ಬೆಲೆಯ ವಿಸ್ಕಿ, ರಮ್, ಬ್ರಾಂಡಿ ಹಾಗೂ ವೋಡ್ಕಾ ದರಗಳು ಶೇ 20ರಿಂದ 30ರಷ್ಟು ಏರಿಕೆಯಾಗಲಿವೆ. ವಿಶೇಷವಾಗಿ 180 ಎಂಎಲ್ ಕ್ವಾರ್ಟರ್ ಪ್ಯಾಕ್‌ಗಳ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. 63 ರೂಪಾಯಿ ಇದ್ದ ಕ್ವಾರ್ಟರ್ ಬೆಲೆ ಈಗ 100 ರೂಪಾಯಿ ದಾಟುವ ಸಾಧ್ಯತೆಗಳಿವೆ.
ಇನ್ನೊಂದೆಡೆ, ವಿದೇಶಿ ಹಾಗೂ ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ದರ ಮಾತ್ರ ಇಳಿಕೆಯಾಗಲಿದೆ. ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್, ಯುನೈಟೆಡ್ ಸ್ಪಿರಿಟ್ಸ್ ಸೇರಿದಂತೆ ದುಬಾರಿ ಮದ್ಯಗಳ ಬೆಲೆ ಶೇ 16ರಿಂದ 20ರಷ್ಟು ಕಡಿಮೆಯಾಗಬಹುದು.