ಮೇ. 2, 3: "CHIVAS ಕಪ್ 2026" ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್
CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ "CHIVAS ಕಪ್ 2026" ಇದೇ ಮೇ 2 ಮತ್ತು 3ರಂದು ಮಣಿಪಾಲದ City Arena ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಯುವ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ವೇದಿಕೆ ಒದಗಿಸುವ ಉದ್ದೇಶದಿಂದ ಈ ಫುಟ್‌ಬಾಲ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಅಂಡರ್-21 ವಿಭಾಗದ ಈ ಪಂದ್ಯಾವಳಿಯಲ್ಲಿ ವಿವಿಧ ಭಾಗಗಳಿಂದ ಬಲಿಷ್ಠ ತಂಡಗಳು ಭಾಗವಹಿಸಲಿದ್ದು ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಗಳನ್ನು ಕಾಣುವ ಅವಕಾಶ ದೊರೆಯಲಿದೆ.
ಪ್ರಥಮ ಬಹುಮಾನವಾಗಿ ₹50,000/- ನಗದು ಹಾಗೂ ದ್ವಿತೀಯ ಬಹುಮಾನವಾಗಿ ₹25,000/- ನಗದು ನೀಡಲಾಗುತ್ತದೆ. ಕೇವಲ 20 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ತಂಡಗಳು ಶೀಘ್ರವಾಗಿ ನೋಂದಣಿ ಮಾಡಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಟೂರ್ನಿಯು Udupi District Athletic Association ನ ಅಧ್ಯಕ್ಷ ಹರಿಪ್ರಸಾದ್ ರೈ ಅವರ ನೇತೃತ್ವದಲ್ಲಿ ಆಯೋಜನೆಯಾಗುತ್ತಿದೆ.
ಕಾರ್ಯಕ್ರಮವನ್ನು ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ. Udupi District Athletic Association ನ ಅಧ್ಯಕ್ಷ ಹರಿಪ್ರಸಾದ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಪ್ರಮುಖರಾದ ಎಂ.ಎ ಗಫೂರ್, ಪ್ರಸಾದ್ ರಾಜ್ ಕಾಂಚನ್, ಅಶೋಕ್ ಕೊಡವೂರು, ಹರೀಶ್ ಕಿಣಿ ಅಲೆವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸದಾನಂದ ಕಾಂಚನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿ ರಾಂ ಶಂಕರ್, ಜಿ.ಪಂ ಸಿಇಓ ಪ್ರತೀಕ್ ಬಾಯಲ್, ಯತೀಶ್ ಕರ್ಕೆರ ಮೊದಲಾದವರು ಭಾಗವಹಿಸಲಿದ್ದಾರೆ.