-->
ಮಂಗಳೂರು- ವಿಜಯಪುರ ರೈಲು ಎಲ್.ಹೆಚ್.ಬಿ ಬೋಗಿಗಳೊಂದಿಗೆ ಸಂಚಾರ ಆರಂಭ

ಮಂಗಳೂರು- ವಿಜಯಪುರ ರೈಲು ಎಲ್.ಹೆಚ್.ಬಿ ಬೋಗಿಗಳೊಂದಿಗೆ ಸಂಚಾರ ಆರಂಭ


ವಿಜಯಪುರ- ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್ ಪ್ರೆಸ್ ರೈಲು ಎಲ್.ಹೆಚ್.ಬಿ ಬೋಗಿಗಳೊಂದಿಗೆ ಸಂಚಾರ ಆರಂಭಿಸಿದೆ.

ಎಲ್‌ಎಚ್‌ಬಿ ಬೋಗಿಗಳಲ್ಲಿ ಸಾಂಪ್ರದಾಯಿಕ ಬೋಗಿಗಳಿಗಿಂತ ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಸಾಧ್ಯವಾಗುತ್ತದೆ. 2019ರ ನ. 11ರಂದು ಆರಂಭಗೊಂಡಿದ್ದ ಈ ರೈಲು ತಾತ್ಕಾಲಿಕ ನೆಲೆಯಲ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ ಆಗಿ ಆರಂಭದಲ್ಲಿ ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವೆ ಸಂಚರಿಸುತ್ತಿತ್ತು. ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡು 2021ರ ಡಿಸೆಂಬರ್‌ನಲ್ಲಿ ಪುನರಾರಂಭಗೊಂಡಿತ್ತು. 2024ರಿಂದ ಮಂಗಳೂರು ಸೆಂಟ್ರಲ್-ವಿಜಯಪುರ ನಡುವೆ ಸಂಚರಿಸುತ್ತಿದೆ. 2025ರ ಸೆ. 1ರ ಅನಂತರ ಖಾಯಂ ರೈಲು ಆಗಿ ಸಂಚರಿಸುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಈ ರೈಲು ಪ್ರತಿದಿನ ಸಂಜೆ 4.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮರುದಿನ ಬೆಳಗ್ಗೆ 10.30ಕ್ಕೆ ವಿಜಯಪು ತಲುಪಲಿದೆ. ವಿಜಯಪುರದಿಂದ ಅಪರಾಹ್ನ 3.15ಕ್ಕೆ ಹೊರಟು ಮರುದಿನ ಬೆಳಗ್ಗೆ 9.55ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪುತ್ತದೆ.

Ads on article

Advertise in articles 1

advertising articles 2

Advertise under the article