ಅಮಾನತುಗೊಂಡಿದ್ದ ರಾಮಚಂದ್ರ ರಾವ್ ಗೆ ಮತ್ತೆ ಡಿಜಿಪಿ ಹುದ್ದೆ
Thursday, May 07, 2026
ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿ ಅಮಾನತುಗೊಂಡಿದ್ದ ಡಿಸಿಆರ್‌ಇ ಪೊಲೀಸ್ ಮಹಾ ನಿರ್ದೇಶಕ ಕೆ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯಸರ್ಕಾರ ಹಿಂಪಡೆದಿದೆ.
ಮೇ.31ರಂದು ನಿವೃತ್ತಿಯಾಗಲಿರುವ ರಾಮಚಂದ್ರ ರಾವ್ ಅವರಿಗೆ ಪೊಲೀಸ್ ಮ್ಯಾನುವಲ್ ಡಿಜಿಪಿಯನ್ನಾಗಿ ನೇಮಿಸಿದೆ. ಕಳೆದ ಜನವರಿಯಲ್ಲಿ ಮಹಿಳೆಯರ ಜೊತೆ ಕಚೇರಿಯಲ್ಲೇ ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಪೊಲೀಸ್ ಇಲಾಖೆ ಹಾಗೂ ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು. ಹೀಗಾಗಿ ರಾಮಚಂದ್ರ ರಾವ್ ಅವರನ್ನು ಅಮಾನತು ಸರ್ಕಾರ ಅಮಾನತುಗೊಳಿಸಿತ್ತು. ವಿಡಿಯೋ ಕುರಿತಂತೆ ತನಿಖೆ ನಡೆಸಿದ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದ ತಂಡ ವಿಡಿಯೋ ಅಸಲಿಯೆಂದು ವರದಿ ನೀಡಿತ್ತು.