-->
ತೆಂಕುಪೇಟೆ ಬೊಬ್ಬರ್ಯ, ಕಾಂತೇರಿ ಪರಿವಾರ ದೈವಗಳಿಗೆ ನೇಮೋತ್ಸವ

ತೆಂಕುಪೇಟೆ ಬೊಬ್ಬರ್ಯ, ಕಾಂತೇರಿ ಪರಿವಾರ ದೈವಗಳಿಗೆ ನೇಮೋತ್ಸವ


ಉಡುಪಿ ಇತಿಹಾಸ ಪ್ರಸಿದ್ಧ ತೆಂಕು ಪೇಟೆ  ವುಡ್‌ಲ್ಯಾಂಡ್ಸ್ ಹೋಟೆಲ್ ಸಮೀಪದ ಬೊಬ್ಬರ್ಯ, ಕಾಂತೇರಿ, ಜುಮಾದಿ, ಕಲ್ಕುಡ ಹಾಗೂ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಜರುಗಿತು.


ಬೊಬ್ಬರ್ಯ ದೈವ, ಕಾಂತೇರಿ ಜುಮಾದಿ, ಪಿಲಿ ಚಂಡಿ ದೈವ ಮತ್ತು ಪಂಜುರ್ಲಿ ದೈವ ಹಾಗೂ ಕಲ್ಕುಡ, ಕೊರಗಜ್ಜ ದೈವ ಪರಿವಾರ ದೈವಗಳಿಗೆ ನೇಮೋತ್ಸವ ನೆರವೇರಿತು. ಈ ವೇಳೆ ಭಕ್ತಾದಿಗಳು ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು.


ನೇಮೋತ್ಸವದ ಅಂಗವಾಗಿ 7ನೇ ವರ್ಷದ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ನಿಟ್ಟೂರು ಮಹಾಬಲ ಶೆಟ್ಟಿ (ದೈವರಾಧನೆ ಕ್ಷೇತ್ರ ಮದಿಪು), ಕೃಷ್ಣ ಪೂಜಾರಿ ಅಂಜಾರು (ಕೊಂಬು ವಾದನ ಹಾಗೂ ಸಮಾಜಸೇವೆ), ಉದಯ ಮೆಂಡನ್ (ಬ್ಯಾಂಡ್ ವಾದನ ಹಾಗೂ ದೈವರಾಧನೆ), ಶಕುಂತಲಾ ಸುಕೇಶ್ (ಸಮಾಜಸೇವೆ), ಆಶಾ ಚಂದ್ರಶೇಖರ್ (ಕ್ರೀಡಾ ಕ್ಷೇತ್ರ), ಸುಕನ್ಯಾ ಶೆಟ್ಟಿ (ಸಮಾಜಸೇವೆ), ಶ್ಯಾಮ ಪಾಣಾರ (ದೈವ ನರ್ತಕರು ದೈವರಾಧನೆ), ಸುಂದರ ಪೂಜಾರಿ ಅಂಜಾರು (ಗರಡಿ ಅರ್ಚಕರು ದೈವರಾಧನೆ) ಹಾಗೂ ಕೃಷ್ಣ ಮಡಿವಾಳ (ದೈವರಾಧನೆ ಕ್ಷೇತ್ರ) ಇವರನ್ನು ಸನ್ಮಾನಿಸಲಾಯಿತು.

ಬೊಬ್ಬರ್ಯ ಸೇವಾ ಸಮಿತಿಯ  ಸ್ಥಾಪಕ ಗೌರವಾಧ್ಯಕ್ಷ ವಿನೋದ್ ಶೆಟ್ಟಿ, ಶೇಖರ್ ಜತ್ತನ್,  ಬಾಲಕೃಷ್ಣ ಶೆಟ್ಟಿ,  ಚಂದ್ರಶೇಖರ್ ಶೆಟ್ಟಿ, ಸುಧಾಕರ್ ಶೆಟ್ಟಿ,ಮಹಾಬಲ ಶೆಟ್ಟಿ ನಿಟ್ಟೂರ್ ,  ಲೋಹಿತ್, ವರದರಾಜ್ ಕಾಮತ್,  ಸುರೇಶ್ ಶೆಟ್ಟಿ ಮೂಡು ಬೆಟ್ಟು, ಸುಲೋಚನ ಶೆಟ್ಟಿ, ರಮಣಿ,  ದಿನೇಶ್ ಪೂಜಾರಿ, ವಿಜಯ ಶೆಟ್ಟಿ, ವಿಜಯ ಮಡಿವಾಳ, ಸಮಿತ ಶೆಟ್ಟಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article