1.40 ಕೋಟಿ ರೂ. ವೆಚ್ಚದ ಕಲ್ಯಾಣಪುರ–ನಿಡಂಬಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಉಡುಪಿಯ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಲ್ಟರ್ ನಜರೆತ್ ಅವರ ಮನೆಯಿಂದ ನಿಡಂಬಳ್ಳಿ ನಾಗೇಶ್ ಸಾಲ್ಯಾನ್ ಅವರ ಮನೆವರೆಗೆ ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ರಸ್ತೆ ಕಾಮಗಾರಿಯನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಲ್ಯಾಣಪುರ–ನಿಡಂಬಳ್ಳಿ ಭಾಗದ ಜನರ ಬಹುಕಾಲದ ಬೇಡಿಕೆಯಂತೆ ಈ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಹಲವು ವರ್ಷಗಳಿಂದ ರಸ್ತೆ ತೀವ್ರ ಹದಗೆಟ್ಟಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸುಮಾರು ₹1.40 ಕೋಟಿ ಅನುದಾನ ಮಂಜೂರು ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ಸರ್ಕಾರದ ಸೀಮಿತ ಅನುದಾನದ ನಡುವೆಯೂ ಕಲ್ಯಾಣಪುರ ಗ್ರಾಮದ ರಸ್ತೆ ಅಭಿವೃದ್ಧಿಗೆ ಗರಿಷ್ಠ ಅನುದಾನ ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾಗರಾಜ ಕುಂದರ್, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್ ಹಾಗೂ ಸುನೀತಾ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ ಕಿಶೋರ್, ಉದಯ ಕುಮಾರ್, ನವೀನ್ ಕಾಂಚನ್, ವಿಶು ಕುಮಾರ್, ಅನಿತಾ ನಾಯ್ಕ್, ರತ್ನ ಉಚ್ಚಿಲ್, ಕವಿತಾ ಮೇಸ್ತ, ಬೆನೆಡಿಕ್ಟ್ ಮೆನೇಜಸ್ ಹಾಗೂ ಜಯಂತಿ ಕಾವೇರಿಜಿಡ್ಡ ಉಪಸ್ಥಿತರಿದ್ದರು.
ಬಿಲ್ಲವ ಒಕ್ಕೂಟದ ಅಧ್ಯಕ್ಷ ಹರೀಶ್ ಕುಮಾರ್, ತೋನ್ಸೆ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಜತ್ತನ್, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ನಗರ ಅಧ್ಯಕ್ಷ ಸುನೀಲ್ ನೇಜಾರ್ ಹಾಗೂ ಸ್ಥಳೀಯ ಪ್ರಮುಖರಾದ ಅಪ್ಪು ಜತ್ತನ್, ಕಿಶೋರ್, ದಿನಕರ ಶೆಟ್ಟಿ, ಶರತ್ ಕುಮಾರ್, ದಿನಕರ್ ಮಾಸ್ಟರ್, ಶರತ್ ಕಲ್ಯಾಣಪುರ, ರವಿ ಕರ್ಕೇರ, ಕೇಶವ್ ಉಚ್ಚಿಲ್, ಸುಧೀರ್ ಪೂಜಾರಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.