ನಾನೂ ಹಿಂದು; ಆದರೆ ಗೋಡ್ಸೆ-ಗೋಳ್ವಾಲ್ಕರ್ ಅವರ ಹಿಂದುತ್ವ ನಮ್ಮದಲ್ಲ: ಬಿ. ಕೆ. ಹರಿಪ್ರಸಾದ್
Wednesday, July 01, 2026
“ನಾನೂ ಹಿಂದು. ಆದರೆ ಗೋಲ್ವಾಲ್ಕರ್, ಸಾವರ್ಕರ್, ಗೋಡ್ಸೆ ಅವರ ಹಿಂದುತ್ವ ನಮ್ಮದಲ್ಲ. ನಮ್ಮದು ಕನಕದಾಸರು, ನಾರಾಯಣ ಗುರುಗಳು ಹಾಗೂ ಮಹಾತ್ಮಾ ಗಾಂಧಿಯವರು ಪ್ರತಿಪಾದಿಸಿದ ಹಿಂದೂ ಧರ್ಮ” ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಅವರು ಬುಧವಾರ ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯ ಭಾರತ್ ಜೋಡೊ ಸಭಾಂಗಣದಲ್ಲಿ ರಾಜ್ಯದ ಕಾಂಗ್ರೆಸ್ ಪ್ರಚಾರ ಸಮಿತಿ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಮಾಜಿ ಸಚಿವರುಗಳಾದ ರಾಣಿ ಸತೀಶ್, ಕಿಮ್ಮನೆ ರತ್ನಾಕರ್, ಎಂ. ಶಿವಣ್ಣ, ಸಂಸದ ಜಿ.ಸಿ. ಚಂದ್ರಶೇಖರ್, ಮಾಜಿ ಸಂಸದ ಡಾ. ಎಲ್. ಹನುಮಂತಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಮುನೀರ್, ರಾಜ್ಯ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಸುಧೀರ್ ಕುಮಾರ್ ಮರೋಳಿ ಅವರು ಪಕ್ಷ ಸಂಘಟನೆ ಕುರಿತು
ವಿವಿಧ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.