-->
 ಬಂಕೇರಕಟ್ಟ ಪುಂಚದಡಿ ಶ್ರೀ ನಾಗರಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಿವಾಜಿ ಸನಿಲ್ ಆಯ್ಕೆ

ಬಂಕೇರಕಟ್ಟ ಪುಂಚದಡಿ ಶ್ರೀ ನಾಗರಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಿವಾಜಿ ಸನಿಲ್ ಆಯ್ಕೆ


ಶ್ರೀ ನಾಗರಾಜ ಸೇವಾ ಸಮಿತಿ, ಪುಂಚದಡಿ-ಬಂಕೇರಕಟ್ಟ, ಅಂಬಲಪಾಡಿ ಇದರ 2026–2028ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಿವಾಜಿ ಸನಿಲ್ ಅವರು ಆಯ್ಕೆಯಾಗಿದ್ದಾರೆ.

ಶ್ರೀ ನಾಗರಾಜ ಸೇವಾ ಸಮಿತಿ, ಪುಂಚದಡಿ-ಬಂಕೇರಕಟ್ಟ, ಅಂಬಲಪಾಡಿ ಇದರ 2026–2028ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸಮಿತಿಯ ನೂತನ ಗೌರವಾಧ್ಯಕ್ಷರಾಗಿ ಸುಧಾಕರ್ ಮೆಂಡನ್ ಹಾಗೂ ವಿಶ್ವನಾಥ್ ಹೆಗ್ಡೆ, ಉಪಾಧ್ಯಕ್ಷರಾಗಿ ರಾಜೇಶ್ ಸುವರ್ಣ ಮತ್ತು ಗುರುರಾಜ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ್ ಕುಂದರ್, ಜಂಟಿ ಕಾರ್ಯದರ್ಶಿಗಳಾಗಿ ನವೀನ್ ಸುವರ್ಣ ಹಾಗೂ ಏಕಾನಂದ ಕೋಟ್ಯಾನ್, ಕೋಶಾಧಿಕಾರಿಯಾಗಿ ಸದಾನಂದ ಜಿ. ಕಾಂಚನ್, ಜಂಟಿ ಕೋಶಾಧಿಕಾರಿಗಳಾಗಿ ರಾಜೇಶ್ ಜತ್ತನ್ ಹಾಗೂ ಸದಾಶಿವ ಅಮೀನ್ ಅವರು ಆಯ್ಕೆಯಾಗಿದರು. 

ಆಡಳಿತ ಸಮಿತಿ ಸದಸ್ಯರಾಗಿ ಶೇಖರ್ ಕುಂದರ್, ಗಣೇಶ್ ಪೂಜಾರಿ, ಗಿರೀಶ್ ಅಮೀನ್, ರೂಪೇಶ್ ಪೂಜಾರಿ, ಕಾರ್ತಿಕ್ ಪೂಜಾರಿ, ಯತೀಶ್ ಸುವರ್ಣ, ಕಿರಣ್ ಪೂಜಾರಿ, ಸಂತೋಷ್ ಪೂಜಾರಿ, ದಯಾನಂದ ಜಿ. ಕಾಂಚನ್, ಸದಾಶಿವ ಕೋಟ್ಯಾನ್, ಉಜ್ವಲ್ ಕುಂದರ್, ಶಶಿಕಾಂತ್ ಪೂಜಾರಿ, ಸತೀಶ್ ಆಚಾರ್ಯ ಹಾಗೂ ಪೂರ್ಣೇಶ್ ಅವರು ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳಿಗೆ ಸದಸ್ಯರು ಅಭಿನಂದನೆ ಸಲ್ಲಿಸಿ, ಸಮಿತಿಯ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article