-->
 ಉದ್ಯಮಿ ಸಂಜೀವ ಕೆ. ಸಾಲಿಯಾನ್‌ ನಿಧನ

ಉದ್ಯಮಿ ಸಂಜೀವ ಕೆ. ಸಾಲಿಯಾನ್‌ ನಿಧನ


ಉಡುಪಿ ತಾಲೂಕು ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಳ ಬಳಿಯ ನಿವಾಸಿ, ಕಾರ್ಕಳ ಬೈಪಾಸ್ ರೋಡ್‌ ಕಾಬೆಟ್ಟುವಿನ ಗಿರಿರಾಜ್ ಚಿಕನ್ ಫಾರ್ಮ್‌‌ನ ಮಾಲೀಕ ಸಂಜೀವ ಕೆ. ಸಾಲಿಯಾನ್ (72) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಇದ್ದಾರೆ.

ಸಂಜೀವ ಕೆ. ಸಾಲಿಯಾನ್ ಅವರು ಕಾಬೆಟ್ಟುವಿನಲ್ಲಿ ಗಿರಿರಾಜ ಫಾರ್ಮ್‌ ಉದ್ಯಮವನ್ನು ಕಳೆದ 26 ನಡೆಸುತ್ತಿದ್ದರು. ಉದ್ಯಮದ ಜತೆಗೆ ಸಮಾಜಮುಖಿ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು. 

ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆ  ಕಾಡುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಬುಧವಾರ ಮಧ್ಯಾಹ್ನ ಊಟ ಸೇವಿಸಿ ಮನೆಯಲ್ಲಿದ್ದ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ದಿಢೀರ್ ಮೃತಪಟ್ಟಿದ್ದಾರೆ. ಜು. 30, ಬೆಳಗ್ಗೆ 8 ಗಂಟೆಗೆ ಕಾರ್ಕಳ ಕಾಬೆಟ್ಟುವಿನಲ್ಲಿ ಸ್ವಗೃಹದಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿದ್ದು, ಆ ಬಳಿಕ ಕುಂಟಲಪಾಡಿ ಸಶ್ಮಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

Ads on article

Advertise in articles 1

advertising articles 2

Advertise under the article