-->
ಪ್ರಚೋದನಕಾರಿ ಭಾಷಣ: ಯಶಪಾಲ್ ವಿರುದ್ಧ ಕಾಂಗ್ರೆಸ್ ದೂರು, ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಪ್ರಚೋದನಕಾರಿ ಭಾಷಣ: ಯಶಪಾಲ್ ವಿರುದ್ಧ ಕಾಂಗ್ರೆಸ್ ದೂರು, ನಗರ ಠಾಣೆಯಲ್ಲಿ ಪ್ರಕರಣ ದಾಖಲು


ಪ್ರಚೋದನಕಾರಿ ಭಾಷಣ ಮಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಟ ಪ್ರಕಾಶ್ ರೈ ಹಾಗೂ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳಿ ಬೆದರಿಕೆ ಒಡ್ಡಿದ ಉಡುಪಿ ಶಾಸಕ ಯಶಪಾಲ ಸುವರ್ಣ ವಿರುದ್ಧ ಕಾಂಗ್ರೆಸ್ ಪಕ್ಷವು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. 


ನಿನ್ಮೆ ತಡರಾತ್ರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡರುಗಳಾದ ಪ್ರಸಾದ್ ರಾಜ್ ಕಾಂಚನ್, ಹರೀಶ್ ಶೆಟ್ಟಿ, ಹಬೀಬ್ ಅಲಿ ಮತ್ತಿತರರು ಪೊಲೀಸ್ ಠಾಣೆಗೆ ತೆರಳಿ ಯಶಪಾಲ್ ವಿರುದ್ಧ ದೂರು ನೀಡಿದ್ದರು.

ಬಿಜೆಪಿಯಿಂದ ಉಡುಪಿಯಲ್ಲಿ ನಡೆದ ವಿದ್ಯಾರ್ಥಿ ಹೋರಾಟ ವಿರುದ್ಧದ ಪ್ರತಿಭಟನೆ ವೇಳೆ ಯಶಪಾಲ್ ಅವರು ರಾಹುಲ್ ಗಾಂಧಿ ಅವರನ್ನು “ಡ್ರಗ್ ಎಡಿಕ್ಟ್” ಎಂದು ಕರೆದಿರುವುದು ಹಾಗೂ “ಬಾಬರ್ ಮಸೀದಿ ಧ್ವಂಸ ಮಾಡಿದಂತೆ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುತ್ತೇವೆ” ಎಂದು ಬೆದರಿಕೆ ಒಡ್ಡಿರುವ ಬಗ್ಗೆ ಕಾಂಗ್ರೆಸ್ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article