-->
 ಉಡುಪಿ ಶ್ರೀ ಕೃಷ್ಣಮಠದಲ್ಲಿ ಪಂಚಕಜ್ಜಾಯ ತಯಾರಿಕೆಗೆ ನೂತನ ಯಂತ್ರಗಳ ಉದ್ಘಾಟನೆ

ಉಡುಪಿ ಶ್ರೀ ಕೃಷ್ಣಮಠದಲ್ಲಿ ಪಂಚಕಜ್ಜಾಯ ತಯಾರಿಕೆಗೆ ನೂತನ ಯಂತ್ರಗಳ ಉದ್ಘಾಟನೆ


ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮುಖ್ಯಪ್ರಾಣ ದೇವರ ಪ್ರತಿನಿತ್ಯ ನಡೆಯುವ ರಂಗಪೂಜೆಗೆ ಬಳಸುವ ಪಂಚಕಜ್ಜಯ ತಯಾರಿಕೆಯನ್ನು ಇನ್ನಷ್ಟು ಸುಲಭ ಹಾಗೂ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಕಡಲೆಯನ್ನು ಹುರಿಯುವ ನೂತನ ಯಂತ್ರ ಹಾಗೂ ಪಂಚಕಜ್ಜಯಕ್ಕೆ ಅಗತ್ಯವಾದ ಹುಡಿ ಮಾಡುವ ನೂತನ ಯಂತ್ರವನ್ನು ಅಳವಡಿಸಲಾಗಿದೆ. 


ಈ ನೂತನ ಯಂತ್ರಗಳನ್ನು ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀಪಾದರು, ದೇವರ ನಿತ್ಯಸೇವೆಯಲ್ಲಿ ಬಳಸುವ ನೈವೇದ್ಯದ ತಯಾರಿಕೆ ಶುಚಿತ್ವ, ಗುಣಮಟ್ಟ ಹಾಗೂ ಸಮಯಪಾಲನೆಯೊಂದಿಗೆ ನಡೆಯುವುದು ಅತ್ಯಂತ ಮುಖ್ಯವಾಗಿದ್ದು, ಈ ನೂತನ ಯಂತ್ರಗಳಿಂದ ಪಂಚಕಜ್ಜಯ ತಯಾರಿಕೆ ಮತ್ತಷ್ಟು ಸುಗಮ ಮತ್ತು ಪರಿಣಾಮಕಾರಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಠದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article