-->
ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹುಂಡಿಗೂ ಕೈಹಾಕಿದ್ದಾರೆ - ಮಂಜುನಾಥ್ ಭಂಡಾರಿ

ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹುಂಡಿಗೂ ಕೈಹಾಕಿದ್ದಾರೆ - ಮಂಜುನಾಥ್ ಭಂಡಾರಿ


ಅಯೋಧ್ಯೆಯ ರಾಮಮಂದಿರವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ, ಇದೀಗ ರಾಮಮಂದಿರದ ಹುಂಡಿ ಹಣಕ್ಕೂ ಕೈಹಾಕಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆರೋಪಿಸಿದ್ದಾರೆ. 

ಉಡುಪಿಯ ಕಾಂಗ್ರೆಸ್ ಭವನದಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 

ರಾಮಮಂದಿರದ ಹೆಸರಿನಲ್ಲಿ ದೇಶದ ರಾಜಕೀಯ ಚಿತ್ರಣವನ್ನು ಬದಲಾಯಿಸಿದ ಬಿಜೆಪಿ, ಈಗ ಭಕ್ತರು ಸಮರ್ಪಿಸಿರುವ ರಾಮಮಂದಿರದ ನಿಧಿಯನ್ನು ಬೇರೆ ಉದ್ದೇಶಗಳಿಗೆ ಬಳಸಲು ಮುಂದಾಗಿದೆ ಎಂದು ಆರೋಪಿಸಿದರು.

ರಾಮನ ಹೆಸರಿನಲ್ಲಿ ರಾಜಕೀಯ ಲಾಭ ಪಡೆದಿರುವ ಬಿಜೆಪಿ, ಈಗ ರಾಮನ ಹುಂಡಿಗೂ ಕೈಹಾಕಿದೆ. ಸುಮಾರು ₹77 ಬಿಲಿಯನ್ ಮೊತ್ತದ ರಾಮಮಂದಿರ ನಿಧಿಗೆ ಕೈಹಾಕಿರುವುದಾದರೆ, ಅದರ ಸಂಪೂರ್ಣ ನೈತಿಕ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊರಬೇಕು. ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಭಂಡಾರಿ ಒತ್ತಾಯಿಸಿದರು.

ರಾಮಮಂದಿರದ ನಿಧಿಗೆ ಸಂಬಂಧಿಸಿದ ಯಾವುದೇ ಕ್ರಮವು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಬಾರದು ಎಂದು ಹೇಳಿದ ಅವರು, ಈ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಹಾಗೂ ರಾಮಮಂದಿರ ನಿಧಿಯ ಬಳಕೆಯ ಬಗ್ಗೆ ದೇಶದ ಜನತೆಗೆ ಪಾರದರ್ಶಕ ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

Ads on article

Advertise in articles 1

advertising articles 2

Advertise under the article