-->
ಉಡುಪಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್-2026

ಉಡುಪಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್-2026


ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ಟ್ರ್ಯಾಕ್ ಆಂಡ್ ಫೀಲ್ಡ್ ಕ್ಲಬ್ ಉಡುಪಿ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್-2026 ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.


ಕ್ರೀಡಾಕೂಟವನ್ನು ಶಾಸಕ ಯಶ್ವಾಲ್ ಸುವರ್ಣ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ಸ್‌ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಅಧ್ಯಕ್ಷತೆಯನ್ನು ವಹಿಸಿದ್ದರು.

ಆಭರಣ ಜುವೆಲ್ಲ‌ರ್ಸ್‌ ಪ್ರಧಾನ ವ್ಯವಸ್ಥಾಪಕ ವಿನೋದ್ ಕಾಮತ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿ ಯೇಶನ್‌ನ ಕಾರ್ಯದರ್ಶಿ ಎ.ರಾಜು ವೇಲು, ಉಡುಪಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ಪ್ರಬಂಧಕ ಲಿಜಾಯ್ ಎಸ್., ಎಲ್‌ಐಸಿ ಹಿರಿಯ ವಿಭಾಗೀಯ ಪ್ರಬಂಧಕ ಗಣಪತಿ ಎನ್. ಭಟ್, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್‌ ಉಪಾಧ್ಯಕ್ಷ ಮಹೇಶ್‌ ಠಾಕೂರು, ವಕೀಲ ಮಿತ್ರಾ ಕುಮಾರ್ ಶೆಟ್ಟಿ, ಉಡುಪಿ ರನ್ನರ್ಸ್ ಕ್ಲಬ್ ನ ಉಪಾಧ್ಯಕ್ಷ ದಿವಾಕ‌ರ್ ಗಣಪತಿ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ನಿಟ್ಟೆ ವಿವಿಯ ನಿರ್ದೇಶಕರಾಗಿ ಆಯ್ಕೆಯಾದ ದೈಹಿಕ ನಿರ್ದೇಶಕ ಗಣೇಶ್ ಪೂಜಾರಿ ಯವರನ್ನು ಸನ್ಮಾನಿಸಲಾಯಿತು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಕೋಶಾಧಿ ನಕಾರಿ ಡಾ.ನಾರಾಯಣ ಪ್ರಭು, ಉಡುಪಿ ಟ್ರ್ಯಾಕ್ ಆಂಡ್ ಫೀಲ್ಡ್ ಕ್ಲಬ್‌ನ ಝಾಹಿರ್ ಅಬ್ಬಾಸ್ ಉಪಸ್ಥಿತರಿದ್ದರು. ಅಸೋಸಿಯೇಶನ್ ಕಾರ್ಯದರ್ಶಿ ದಿನೇಶ್ ಕುಮಾರ್ ಸ್ವಾಗತಿಸಿದರು. ವರದರಾಜ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 14, 16, 18 ವರ್ಷದೊಳಗಿನ ಹಾಗೂ 20 ವರ್ಷದೊಳಗಿನ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 400ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಸಮಗ್ರ ಪ್ರಶಸ್ತಿಯನ್ನು ನಿಟ್ಟೆ ಎಜುಕೇಶನಲ್ ಟ್ರಸ್ಟ್ ಪಡೆದುಕೊಂಡರೆ, ರನ್ನರ್ಸ್ ಪ್ರಶಸ್ತಿಯನ್ನು ಉಡುಪಿ ಯುವಜನ ಕ್ರೀಡಾ ಇಲಾಖೆಯ ವಸತಿ ಶಾಲೆ ಪಡೆದುಕೊಂಡಿತು.ಅಂಡರ್ 14 ಬಾಲಕರ ವಿಭಾಗ- ಸಿದ್ದಾರ್ಥ್, ಬಾಲಕಿ ಯರ ವಿಭಾಗ- ತನೀಕ್ಷಾ ಅಂಡರ್ 16 ಬಾಲಕ- ಪ್ರಕುಲ್ ಕುಂದ‌ರ್, ಬಾಲಕಿ- ಸಾನಿಧ್ಯಾ, ಅಂಡರ್ 18 ಬಾಲಕ- ಮಂಜುನಾಥ್, ಬಾಲಕಿ-ದೀಕ್ಷಿತಾ, ಅಂಡರ್ 20 ಪುರುಷ- ಚಿರಾಗ್ ಪೂಜಾರಿ, ಮಹಿಳೆ- ಸ್ತುತಿ ಪಿ. ಶೆಟ್ಟಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಪ್ರಶಸ್ತಿ ಪ್ರಧಾನ ಮಾಡಿದರು. ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಹರಿಪ್ರಸಾದ್ ರೈ, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿ ಯೇಶನ್‌ನ ಕಾರ್ಯದರ್ಶಿ ಎ.ರಾಜು ವೇಲು, ಆಭರಣ ಜುವೆಲ್ಸರ್‌ನ ನಿರ್ದೇಶಕ ಸಾತ್ವಿಕ್ ಕಾಮತ್, ಉಡುಪಿ ರನ್ನರ್ಸ್ ಕ್ಲಬ್‌ನ ಉಪಾಧ್ಯಕ್ಷ ದಿವಾಕರ್ ಗಣಪತಿ ನಾಯಕ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article