-->
ಮಣಿಪಾಲ-ಅಂಬಾಗಿಲು ರಸ್ತೆಯಲ್ಲಿ ಅಪಾಯಕಾರಿ ವ್ಹಿಲಿಂಗ್: ಸವಾರನ ವಿರುದ್ಧ ಪ್ರಕರಣ ದಾಖಲು

ಮಣಿಪಾಲ-ಅಂಬಾಗಿಲು ರಸ್ತೆಯಲ್ಲಿ ಅಪಾಯಕಾರಿ ವ್ಹಿಲಿಂಗ್: ಸವಾರನ ವಿರುದ್ಧ ಪ್ರಕರಣ ದಾಖಲು



ಮಣಿಪಾಲ–ಅಂಬಾಗಿಲು ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ವೀಲಿಂಗ್ ಮಾಡಿದ ಬೈಕ್ ಸವಾರನ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ರೀಲ್ಸ್ ಆಧರಿಸಿ ಅಪಾಯಕಾರಿ ರೀತಿಯಲ್ಲಿ ಬೈಕ್ ಚಲಾಯಿಸಿದ ಆರೋಪದ ಮೇಲೆ ಬುಲೆಟ್ ಸವಾರ ಮೋಹಿತ್ ಸ್ವರೂಪ್ (31) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಈತ ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟಾರ್‌ಸೈಕಲ್ ಅನ್ನು 2026ರ ಜನವರಿ 8ರಂದು ಸಂಜೆ 4.12 ಗಂಟೆಗೆ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಪೆರಂಪಳ್ಳಿಯ ಸಾಯಿರಾಧ ವಿಲ್ಲಾ ಎದುರಿನ ಮಣಿಪಾಲ–ಅಂಬಾಗಿಲು ಸಾರ್ವಜನಿಕ ರಸ್ತೆಯಲ್ಲಿ ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದಾನೆ ಎನ್ನಲಾಗಿದೆ.

 ಸಾರ್ವಜನಿಕ ರಸ್ತೆಯಲ್ಲೇ ಬೈಕ್ ಅನ್ನು ಏಕಾಏಕಿ ಜಂಪ್ ಮಾಡಿ ಹಾರಿಸುವ ಮೂಲಕ ಇತರ ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ದುಸ್ಸಾಹಸ ಪ್ರದರ್ಶಿಸಿದ್ದಾನೆ.

ಈ ಘಟನೆಯ ವಿಡಿಯೋ ರೀಲ್ಸ್ 2026ರ ಆಗಸ್ಟ್ 2ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಮಾಹಿತಿ ಸಂಗ್ರಹಿಸಿ ಬೈಕ್ ಸವಾರನನ್ನು ಗುರುತಿಸಿದ್ದಾರೆ. ಬಳಿಕ ಕಾನೂನು ಕ್ರಮ ಕೈಗೊಳ್ಳುವಂತೆ ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಅಪಾಯಕಾರಿ ಸಾಹಸ ಪ್ರದರ್ಶನಗಳು ಕಾನೂನುಬಾಹಿರವಾಗಿದ್ದು, ಇತರರ ಜೀವಕ್ಕೆ ಅಪಾಯ ಉಂಟುಮಾಡುವ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article