-->
 ಉಡುಪಿ: ರಾ.ಹೆ ಪಕ್ಕದ ಕಟ್ಟಡಗಳಿಗೆ ಹೆಚ್ಚುವರಿ ಸೆಟ್‌ಬ್ಯಾಕ್ ಕಡ್ಡಾಯ: ಜಿಲ್ಲಾಡಳಿತ ಸೂಚನೆ

ಉಡುಪಿ: ರಾ.ಹೆ ಪಕ್ಕದ ಕಟ್ಟಡಗಳಿಗೆ ಹೆಚ್ಚುವರಿ ಸೆಟ್‌ಬ್ಯಾಕ್ ಕಡ್ಡಾಯ: ಜಿಲ್ಲಾಡಳಿತ ಸೂಚನೆ


ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಕಟ್ಟಡ ನಿರ್ಮಿಸುವವರು  ನಿಗದಿತ Set-back Distance ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಡುಪಿ ಜಿಲ್ಲಾಡಳಿತವು ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.


ಈ ಕುರಿತು ಜಿಲ್ಲಾಧಿಕಾರಿಗಳ ಸೂಚನೆಯಂತೆ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆಗಳು, ಪುರಸಭೆಗಳು, ಪಟ್ಟಣ ಪಂಚಾಯತ್‌ಗಳು ಹಾಗೂ ತಾಲೂಕು ಪಂಚಾಯತ್‌ಗಳ ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಮಧ್ಯರೇಖೆಯಿಂದ ವಸತಿ ಕಟ್ಟಡಗಳಿಗೆ 40 ಮೀಟರ್ ಹಾಗೂ ವಾಣಿಜ್ಯ ಕಟ್ಟಡಗಳಿಗೆ 75 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಕಟ್ಟಡ ನಿರ್ಮಾಣ, ಭೂಬಳಕೆ ಬದಲಾವಣೆ, ಅಭಿವೃದ್ಧಿ ಕಾಮಗಾರಿ ಅಥವಾ ಇತರೆ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂದು ಸೂಚಿಸಲಾಗಿದೆ. ಸುಪ್ರೀಂಕೋರ್ಟ್ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾರ್ಗಸೂಚಿಗಳಂತೆ ಈ ಸುರಕ್ಷತಾ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.


ಅದರಂತೆ, ಗ್ರಾಮ ಪಂಚಾಯತ್‌ಗಳು, ಪಟ್ಟಣ ಪಂಚಾಯತ್‌ಗಳು, ಪುರಸಭೆಗಳು, ನಗರಸಭೆಗಳು ಹಾಗೂ ಇತರೆ ಅನುಮತಿ ನೀಡುವ ಪ್ರಾಧಿಕಾರಗಳು ರಾಷ್ಟ್ರೀಯ ಹೆದ್ದಾರಿಯ ನಿಗದಿತ ಸುರಕ್ಷತಾ ವ್ಯಾಪ್ತಿಯೊಳಗೆ ಕಟ್ಟಡ ನಿರ್ಮಾಣ ಪರವಾನಗಿ, ಅಭಿವೃದ್ಧಿ ಅನುಮತಿ, ಭೂಬಳಕೆ ಬದಲಾವಣೆ  ಹಾಗೂ ನಿರಾಕ್ಷೇಪಣಾ ಪತ್ರ ನೀಡುವ ಸಂದರ್ಭದಲ್ಲಿ ನಿಗದಿತ Set-back Distance ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.

Ads on article

Advertise in articles 1

advertising articles 2

Advertise under the article