-->
 ನಿಟ್ಟೆ: ಜುಗಾರಿ ಅಡ್ಡೆಗೆ ದಾಳಿ- 7 ಮಂದಿ ಬಂಧನ, ನಾಲ್ವರು ಪರಾರಿ

ನಿಟ್ಟೆ: ಜುಗಾರಿ ಅಡ್ಡೆಗೆ ದಾಳಿ- 7 ಮಂದಿ ಬಂಧನ, ನಾಲ್ವರು ಪರಾರಿ


ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಹೋಟೆಲ್ ಸನ್ಮಾನ್ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ಇಸ್ಪೀಟು  ಅಡ್ಡೆಗೆ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಜುಗಾರಿ ನಿರತ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಸುಜೀತ್, ಅಭಿಮನ್ಯು, ಮಹೇಶ್, ಧೀರಜ್, ನರೇಶ್ ಕುಮಾರ್ ಹಾಗೂ ಪ್ರಶಾಂತ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಯಶೋಧರ (ಅಣ್ಣು), ನೂರು ಮಹಮ್ಮದ್, ರವಿ ಶೆಟ್ಟಿ ಮತ್ತು ಸತೀಶ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಪೊಲೀಸರು ದಾಳಿ ವೇಳೆ ಜುಗಾರಿಗೆ ಬಳಸಲಾಗಿದ್ದ 16,350 ರೂ. ನಗದು, ಇಸ್ಪೀಟು ಎಲೆಗಳು, 7 ಮೊಬೈಲ್ ಫೋನ್‌ಗಳು (ಅಂದಾಜು ಮೌಲ್ಯ 17,000 ರೂ.) ಹಾಗೂ ಕುರ್ಚಿ ಸೇರಿದಂತೆ ಜುಗಾರಿ ನಡೆಸಲು ಬಳಸಿದ ಪೀಠೋಪಕರಣಗಳನ್ನು (ಅಂದಾಜು ಮೌಲ್ಯ 10,500 ರೂ.) ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.


 

Ads on article

Advertise in articles 1

advertising articles 2

Advertise under the article