ಆ. 8: ಲಯನ್ಸ್ ಜಿಲ್ಲೆ 317C ಯ ಸಂಪುಟ ಪದಗ್ರಹಣ
ವಿಭಜಿತ ಲಯನ್ಸ್ ಜಿಲ್ಲೆ 317C ಯ XXIV ನೇ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭವು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಗಸ್ಟ್ 8 ರಂದು ಅಪರಾಹ್ನ 4.30 ರಿಂದ ಜರುಗಲಿದೆ ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಹಾಗೂ ಮುಖ್ಯ ಸಲಹೆಗಾರರಾದ ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಲಯಲ್ಸ್ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಥಮ ಮಹಿಳೆ ಲಯನ್ ವೀಣಾ ಆರ್ ಕೋಟ್ಯಾನ್ ದೀಪ ಬೆಳಗಿ ಉದ್ಘಾಟಿಸುವರು. ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ನ ಅಧ್ಯಕ್ಷ ಲಯನ್ ಪ್ರಸಾದ್ ಕುಮಾರ್ ಕೋಡಿ ಮತ್ತು ಸದಸ್ಯರು ಕಾರ್ಯಕ್ರಮದ ಆತಿಥ್ಯವನ್ನು ವಹಿಸಿದ್ದಾರೆ. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ನ ಮಾಜಿ ಅಂತರಾಷ್ಟ್ರೀಯ ನಿರ್ದೇಶಕರು, ಖ್ಯಾತ ತರಬೇತುದಾರರಾದ ಪಂಕಜ್ ಮೆಹ್ರಾ ರವರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಅಂತರಾಷ್ಟ್ರೀಯ ನಿರ್ದೇಶಕರಾದ ಲಯನ್ ವಂಶಿಧರ್ ಬಾಬು, ಕೃಷ್ಣ ರೆಡ್ಡಿ ಮತ್ತು Multiple ನ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ರಾಮಚಂದ್ರನ್ ರವರು ಭಾಗವಹಿಸಲಿದ್ದಾರೆ. ಪ್ರಥಮ ಉಪಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಮತ್ತು ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ಇಂಜಿನಿಯರ್ ರಮಾನಂದ ಕೆ. ಸಂಪುಟ ಕಾರ್ಯದರ್ಶಿ ಲಯನ್ ಸದಾನಂದ ನಾವಡ, ಕೋಶಾಧಿಕಾರಿ ಲಯನ್ ವಿನೋದ್ ನಾರಾಯಣ ಮತ್ತು ಸಂಪುಟ ಸದಸ್ಯರ ಪದಗ್ರಹಣ ನಡೆಯಲಿದೆ. ಲಯನ್ಸ್ ಜಿಲ್ಲೆಯ XXIV ಲಯನ್ಸ್ ಕ್ಲಬ್ ಗಳ ಪದಾಧಿಕಾರಿಗಳು, ಮಾಜಿ ಜಿಲ್ಲಾ ಗವರ್ನರ್ ಗಳು, ಲಯನ್ ಸದಸ್ಯರು, ಅತಿಥಿಗಳು, ಸುಮಾರು 1000 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಪದಗ್ರಹಣ ಸಮಿತಿಯ ಮುಖ್ಯ ಸಲಹೆಗಾರರಾಗಿ ಮಾಜಿ ಜಿಲ್ಲಾ ಗವರ್ನರ್ ಗಳಾದ ಜಯ-ಶೆಟ್ಟಿ ಇಂದ್ರಾಳಿ, ಲಯನ್ ಎನ್ ಎಮ್ ಹೆಗಡೆ ಮತ್ತು ಲಯನ್ ಬಿ ಅರುಣ್ ಕುಮಾರ್ ಹೆಗಡೆ, ಅಧ್ಯಕ್ಷ ಲಯನ್ ಸಿದ್ದರಾಜು, ಕಾರ್ಯದರ್ಶಿಯಾಗಿ ಲಯನ್ ಪ್ರಕಾಶ ಚಂದ್ರ, ಕೋಶಾಧಿಕಾರಿಯಾಗಿ ಲಯನ್ ಒ ಸೋಮನಾಥ್ ಹೆಗಡೆ ಕಾರ್ಯಕ್ರಮವನ್ನು ಸಂಯೋಜನೆಗೊಳಿಸಿರುತ್ತಾರೆ. ವಿಭಜಿತ ಲಯನ್ಸ್ 317C -ಕಂದಾಯ ಜಿಲ್ಲೆ ಮತ್ತು ಭಟ್ಕಳದ ವ್ಯಾಪ್ತಿಯಲ್ಲಿರುವ ಲಯನ್ಸ್ ಕ್ಲಬ್ ಗಳನ್ನು ಒಳಗೊಂಡಿರುತ್ತದೆ.
ನೂತನ ಗವರ್ನರ್ ರಾಜೀವ್ ಕೋಟ್ಯಾನ್ ಓರ್ವ ಕ್ರೀಯಾಶೀಲ, ಸಮಾಜಮುಖಿ ಸದಸ್ಯರಾಗಿ 40 ವರ್ಷಗಳಿಂದ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಚಕ್ರವರ್ತಿ ಕ್ರಿಕೆಟರ್ಸ್ ಮೂಲಕ ಓರ್ವ ಅತ್ಯುತ್ತಮ ಕ್ರೀಡಾ ಪಟುವಾಗಿದ್ದಾರೆ. ಕುಂದಾಪುರ ಮುನ್ಸಿಪಾಲಿಟಿಯ ಉಪಾಧ್ಯಕ್ಷರಾಗಿ ಹಲವಾರು ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾರೆ. ಇವರ ಪತ್ನಿ ವೀಣಾ ಆರ್ ಕೋಟ್ಯಾನ್ ಸಹ ಕುಂದಾಪುರ ಸಿಟಿ ಸೆಂಟರ್ ನ ಮಹಿಳಾ ಅಧ್ಯಕ್ಷೆಯಾಗಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುತ್ತಾರೆ. ಪ್ರಸ್ತುತ ವರ್ಷ ಈಗಾಗಲೇ ಹಾಂಕಾಂಗ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಗೈದಿರುವ ಇವರು ಪ್ರಸ್ತುತ ವರ್ಷ ಹಲವಾರು ಸೇವಾ ಯೋಜನೆಯನ್ನು ತನ್ನ ಧೈಯ ವಾಕ್ಯದಲ್ಲಿ ಜೀವನೋತ್ಸಹ ತುಂಬುವ ಸದುದ್ದೇಶವನ್ನು ಹೊಂದಿರುತ್ತಾರೆ. ಮಳೆ ನೀರು ಸಂಗ್ರಹ, ಕಲೆ ಕೌಶಲ್ಯಗಳಿಗೆ ಉತ್ತೇಜನ, ಜ್ಞಾನ ದೀಪ ಯೋಜನೆ, ನಿರಂತರ ಕಣ್ಣಿನ ಶಸ್ತ್ರಕ್ರಿಯಾ ಕಾರ್ಯಕ್ರಮ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲ ಬುದ್ದಿಮಾಂದ್ಯ ಯುವಕರ ಮತ್ತು ಮಹಿಳೆಯರ ಸಬಲೀಕರಣ, ಉದ್ಯೋಗ ಮೇಳ ಇನ್ನಿತರ ಸೇವಾ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯ ಪ್ರತಿಷ್ಠೆ ಗೌರವವನ್ನು ವೃದ್ಧಿಸುವ ಇರಾದೆಯನ್ನು ಹೊಂದಿರುತ್ತಾರೆ ಎಂದರು.
ನೂತನ ಗವರ್ನರ್ ರಾಜೀವ್ ಕೋಟ್ಯಾನ್ ಮಾತನಾಡಿ, 2026-27ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಜನೋಪಯೋಗಿ ಸೇವಾ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವ ಗುರಿಯನ್ನು ಲಯನ್ಸ್ ಕ್ಲಬ್‌ಗಳು ಹೊಂದಿವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 75 ಲಯನ್ಸ್ ಕ್ಲಬ್‌ಗಳಲ್ಲಿ 2,500ಕ್ಕೂ ಹೆಚ್ಚು ಸದಸ್ಯರು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಂದು ಕ್ಲಬ್‌ನಿಂದ ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಯೋಜನೆ, ಆರ್ಥಿಕವಾಗಿ ಹಿಂದುಳಿದವರ ಹಸಿವು ನಿವಾರಣೆ, ಮಧುಮೇಹ ತಡೆಗಟ್ಟುವಿಕೆ, ಯುವಜನರಿಗೆ ಉದ್ಯೋಗ ಮಾಹಿತಿ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವು ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಈ ವರ್ಷ ಸುಮಾರು 10,000 ಯೂನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದ್ದು, ಸುಮಾರು 10,000 ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ಕಣ್ಣಿನ ತಪಾಸಣೆ ನಡೆಸಿ ಉಚಿತ ಕನ್ನಡಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಇದಲ್ಲದೆ, ಸರ್ಕಾರಿ ಶಾಲೆಗಳ ಮಧ್ಯಾಹ್ನದ ಉಚಿತ ಊಟ (ಅನ್ನದಾಸೋಹ) ಕಾರ್ಯಕ್ರಮಗಳಲ್ಲಿ ಲಯನ್ಸ್ ಕ್ಲಬ್‌ಗಳು ಸಕ್ರಿಯವಾಗಿ ಭಾಗವಹಿಸಲಿವೆ. 2026-27ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ಸಮುದಾಯಗಳ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯವಿರುವವರಿಗೆ ನೆರವಿನ ಹಸ್ತ ನೀಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿದೆ ಎಂದು ರಾಜೀವ್ ಕೋಟ್ಯಾನ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317C ಯ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪ್ರಕಾಶ್ಚಂದ್ರ, ಸಂಪುಟ ಕಾರ್ಯದರ್ಶಿ ಸದಾನಂದ ನಾವಡ ಮೊದಲಾದವರು ಉಪಸ್ಥಿತರಿದ್ದರು.
