ತೋನ್ಸೆ ಗರೋಡಿಯ ಬಿಲ್ಲವ ಒಕ್ಕೂಟದ ಉಪಾಧ್ಯಕ್ಷ ಬಾಲರಾಜ್ ಕೋಟ್ಯಾನ್ ನಿಧನ
Monday, August 31, 2026
ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿಯ ತೋನ್ಸೆ ಬಿಲ್ಲವ ಒಕ್ಕೂಟದ ಉಪಾಧ್ಯಕ್ಷ ಬಾಲರಾಜ್ ಕೋಟ್ಯಾನ್ ಹೂಡೆ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರ ಅಂತಿಮ ವಿಧಿ ವಿಧಾನಗಳು ಸೆ. 1ರಂದು ಅವರ ಸ್ವಗೃಹ ಹೂಡೆಯಲ್ಲಿ ನೆರವೇರಲಿದೆ. ಬಳಿಕ ಅಂತ್ಯಕ್ರಿಯೆಯು ಹೊಡೆಯ ಬಿಲ್ಲವ ರುದ್ರಭೂಮಿಲ್ಲಿ ಮಧ್ಯಾಹ್ನ 12.00 ಗಂಟೆಗೆ ನೆರವೇರಲಿದೆ. ಬಾಲರಾಜ್ ಅವರ ನಿಧನಕ್ಕೆ ಬಿಲ್ಲವ ಒಕ್ಕೂಟದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.