ದೆಹಲಿಯಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ: ಬಿ.ಎಲ್. ಸಂತೋಷ್, ಬಾನ್ಸುರಿ ಸ್ವರಾಜ್ ಭೇಟಿ
Friday, August 28, 2026
ಪವಿತ್ರ ಶ್ರಾವಣ ಶುಕ್ರವಾರ, ಶ್ರೀ ಹಯಗ್ರೀವ ಜಯಂತಿ, ಸಂಸ್ಕೃತ ದಿನಾಚರಣೆ ಹಾಗೂ ರಕ್ಷಾಬಂಧನ ದಿನದ ಅಂಗವಾಗಿ ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ಚಾತುರ್ಮಾಸ್ಯ ವ್ರತದಲಿರುವ ಶ್ರೀ ಪೇಜಾವರ ಶ್ರೀಗಳನ್ನು ಹಲವು ಗಣ್ಯರು ಭೇಟಿಯಾದರು.
ಶ್ರೀ ಪೇಜಾವರ ಶ್ರೀಗಳ ಚಾತುರ್ಮಾಸ್ಯ ಸತ್ರದ ಪೂರ್ಣ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿರುವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಇಂದು ಬೆಳಗ್ಗೆ ವೇದವ್ಯಾಸ ಗುರುಕುಲಕ್ಕೆ ಭೇಟಿ ನೀಡಿದರು.
ಅವರೊಂದಿಗೆ ದೆಹಲಿ ಸಂಸತ್ ಸದಸ್ಯೆ ಹಾಗೂ ದಿವಂಗತ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಶಾಸಕ ಅನಿಲ್ ಶರ್ಮಾ, ಬಿಜೆಪಿಯ ಈಶಾನ್ಯ ಭಾರತ ಸಂಯೋಜಕ ಹಾಗೂ ಉದ್ಯಮಿ ರಾಜ್ ಬಬ್ಬರ್ ಅವರು ಗುರುಕುಲಕ್ಕೆ ಆಗಮಿಸಿದರು.
ವೇದವ್ಯಾಸ ಗುರುಕುಲದಲ್ಲಿ ಶ್ರೀ ಕೃಷ್ಣ–ಮುಖ್ಯಪ್ರಾಣ ದೇವರ ದರ್ಶನ ಪಡೆದು, ಶ್ರೀ ಪೇಜಾವರ ಶ್ರೀಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಚಾತುರ್ಮಾಸ್ಯ ಸತ್ರದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದ ಅವರು, ಶ್ರೀಗಳ ಆಶೀರ್ವಾದ ಪಡೆದು ಅನುಗ್ರಹ ಪ್ರಸಾದ ಸ್ವೀಕರಿಸಿದರು.