ಗಗನಕ್ಕೇರಿದ ಚಿನ್ನ-ಬೆಳ್ಳಿ ಬೆಲೆ: ಒಂದೇ ದಿನದಲ್ಲಿ ಭಾರೀ ಏರಿಕೆ, ಗ್ರಾಹಕರಿಗೆ ಶಾಕ್
ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. 18, 22 ಮತ್ತು 24 ಕ್ಯಾರೆಟ್ ಚಿನ್ನದ ದರಗಳು ಮಂಗಳವಾರದ ಬೆಲೆಗೆ ಹೋಲಿಸಿದರೆ ಹೆಚ್ಚಳ ಕಂಡಿದ್ದು, ಆಭರಣ ಖರೀದಿದಾರರಿಗೆ ಮತ್ತಷ್ಟು ಹೊರೆ ಉಂಟಾಗಿದೆ.
22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 13,360 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 1,33,600 ರೂ. ಆಗಿದೆ. ಮಂಗಳವಾರದ ದರಕ್ಕೆ ಹೋಲಿಸಿದರೆ 1 ಗ್ರಾಂಗೆ 160 ರೂ. ಹಾಗೂ 10 ಗ್ರಾಂಗೆ 1,600 ರೂ. ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. 1 ಗ್ರಾಂ ಚಿನ್ನದ ದರ 14,575 ರೂ ಇದ್ದು, 10 ಗ್ರಾಂ ಚಿನ್ನದ ಬೆಲೆ 1,45,750 ರೂಪಾಯಿಗೆ ತಲುಪಿದೆ. ಹಿಂದಿನ ದಿನದೊಂದಿಗೆ ಹೋಲಿಸಿದರೆ 1 ಗ್ರಾಂಗೆ 175 ಹಾಗೂ 10 ಗ್ರಾಂಗೆ 1,750 ಏರಿಕೆಯಾಗಿದೆ.
ಇದೇ ವೇಳೆ ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದೆ. ಬುಧವಾರ 1 ಗ್ರಾಂ ಬೆಳ್ಳಿ 240 ಹಾಗೂ 1 ಕೆ.ಜಿ. ಬೆಳ್ಳಿ 2,40,000ಕ್ಕೆ ಮಾರಾಟವಾಗುತ್ತಿದೆ. ಮಂಗಳವಾರದ ಬೆಲೆಗೆ ಹೋಲಿಸಿದರೆ 1 ಗ್ರಾಂಗೆ 5 ಹಾಗೂ 1 ಕೆ.ಜಿಗೆ 5,000 ಹೆಚ್ಚಳವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ ಏರಿಕೆ, ಹೂಡಿಕೆದಾರರ ಬೇಡಿಕೆ ಹಾಗೂ ಕರೆನ್ಸಿ ವಿನಿಮಯ ದರದ ಬದಲಾವಣೆಗಳ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳಿಗೆ ಅನುಗುಣವಾಗಿ ಬೆಲೆಗಳಲ್ಲಿ ಮತ್ತಷ್ಟು ಏರಿಳಿತವಾಗುವ ಸಾಧ್ಯತೆ ಇದೆ.