ಉಡುಪಿ: ಭಾರೀ ಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಮರ: ವಿದ್ಯುತ್ ಕಂಬಗಳು ಧರಶಾಹಿ
Saturday, August 01, 2026
ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳಗೆ ಉಡುಪಿ ಚಿಟ್ಪಾಡಿ ಬಳಿಯ ವಿಜಯ ವೀರ ಸಂಘ ರಸ್ತೆಯಲ್ಲಿದ್ದ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ.
ಈ ಸಂಧರ್ಭದಲ್ಲಿ ಮೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರಶಾಹಿಯಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಸ್ಥಳೀಯ ಯುವಕರು ಹಾಗೂ ಎನ್ ಎಸ್ ಯು ಐ ಜಿಲ್ಲಾ ಉಪಾಧ್ಯಕ್ಷ ಶರತ್ ಕುಂದರ್ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯರು ಹಾಗೂ ವಿಜಯ ವೀರ ಸಂಘದ ಸದಸ್ಯರುಗಳ ಸಹಾಯದಿಂದ ಮರವನ್ನು ರಸ್ತೆಯಿಂದ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
