ಗುಜ್ಜಾಡಿ ಪಂಚಾಯತ್ PDO ಆಗಿ ದಿನಕರ್ ಬೆಂಗ್ರೆ ಮುಂಭಡ್ತಿ
Sunday, August 30, 2026
ಉಡುಪಿ ತಾಲೂಕಿನ ತೋನ್ಸೆ ಪಂಚಾಯತ್'ನಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಬಳಿಕ ಮುಂಭಡ್ತಿ ಹೊಂದಿರುವ ದಿನಕರ ಬೇಂಗ್ರೆ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದಾರೆ.
ತೋನ್ಸೆ ಪಂಚಾಯತ್'ನಲ್ಲಿ ಬಿಲ್ ಕಲೆಕ್ಟರ್ & ಕಾರ್ಯದರ್ಶಿಯಾಗಿ ದುಡಿದಿರುವ ಅವರು ಆಗಸ್ಟ್ ತಿಂಗಳ 27ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗುಜ್ಜಾಡಿ ಪಂಚಾಯತ್'ಗೆ ಅಧಿಕೃತವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (PDO) ನಿಯುಕ್ತಿ ಆಗಿರುತ್ತಾರೆ.
ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ರಾಜ್ಯ ಮಟ್ಟದ ಸೌಹಾರ್ದ ಚಳುವಳಿಯ ಭಾಗವಾಗಿ ಸೇವೆ ಸಲ್ಲಿಸಿದ್ದಾರೆ.