ಎಂ.ಆರ್.ಪಿ.ಎಲ್.: ಮೃತ ರಾಜೇಶ್ ಡಿ’ಸಿಲ್ವ ಕುಟುಂಬಕ್ಕೆ ರೂ. 1.20 ಕೋಟಿ ಪರಿಹಾರ ಘೋಷಣೆ
Saturday, October 17, 2026
ಎಂ.ಆರ್.ಪಿ.ಎಲ್.ನಲ್ಲಿ ಸೆ. 30ರಂದು ನಡೆದ ಸ್ಪೋಟ ಪ್ರಕರಣದಲ್ಲಿ ಗಂಭೀರ ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ ಡಿಸಿಲ್ವಾ ಇಂದು ಮೃತಪಟ್ಟ ಬೆನ್ನಿಗೇ ಎಂ.ಆರ್.ಪಿ.ಎಲ್ ಆಡಳಿತ ಅವರ ಕುಟುಂಬಕ್ಕೆ ರೂ. 1.20 ಪರಿಹಾರ ಘೋಷಿಸಿದೆ.
ಎಂ.ಆರ್.ಪಿ.ಎಲ್ ನ ಮಾನವ ಸಂಪನ್ಮೂಲ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಪ್ರಶಾಂತ್ ಶಂಕರ್ ಪೊದುವಾಳ್ ಅವರು ಘಟನೆ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ಖರ್ಚು ವೆಚ್ಚ ಭರಿಸುವುದರ ಜೊತೆಗೆ ರೂ. 1,20 ಕೋಟಿ ಪರಿಹಾರವನ್ನೂ ಘೋಷಿಸಿದ್ದಾರೆ.