ನವರಾತ್ರಿ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಶ್ರೀ ವೇದವರ್ಧನತೀರ್ಥ ಶ್ರೀಗಳಿಂದ ವ್ಯಾಸಪೂಜೆ
Saturday, October 17, 2026
ನವರಾತ್ರಿ ಅಂಗವಾಗಿ ಪರ್ಯಾಯ ಶೀರೂರು ಮಠದ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣ ಮಠದ ಚಂದ್ರಶಾಲೆಯಲ್ಲಿ ವ್ಯಾಸಪೂಜೆಯನ್ನು ನೆರವೇರಿಸಿದರು.
ಚಂದ್ರಶಾಲೆಯ ಚಿನ್ನದ ಮಂಟಪದಲ್ಲಿರುವ ಸ್ವರ್ಣಪೀಠದಲ್ಲಿ ಶ್ರೀ ವೇದವ್ಯಾಸ ದೇವರನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಮೂರು ದಿನಗಳ ಕಾಲ ನಡೆಯುವ ಈ ಪೂಜೆಯಲ್ಲಿ ಆಚಾರ್ಯ ಮಧ್ವರು ರಚಿಸಿದ ಕೃತಿಗಳು ಹಾಗೂ ತಾಳೆಗರಿಗಳನ್ನು ಇರಿಸಿ ಪೂಜಿಸುವುದು ವಿಶೇಷವಾಗಿದೆ.
ನವರಾತ್ರಿ ಮಹೋತ್ಸವದ ಶಾರದಾಪೂಜೆಯ ನಿಮಿತ್ತ ಮಠದ ಸಂಪ್ರದಾಯದಂತೆ ವ್ಯಾಸಪೂಜೆಯನ್ನು ಮೂರು ದಿನಗಳ ಕಾಲ ನಡೆಸಲಾಗುತ್ತದೆ. ಪ್ರತಿದಿನ ಮೂರು ಹೊತ್ತು ನಡೆಯುವ ಈ ಧಾರ್ಮಿಕ ವಿಧಿವಿಧಾನಗಳು ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿವೆ.
ಶ್ರೀ ವೇದವ್ಯಾಸ ದೇವರ ಆರಾಧನೆಯೊಂದಿಗೆ ಜ್ಞಾನ, ವಿದ್ಯೆ ಮತ್ತು ಧಾರ್ಮಿಕ ಪರಂಪರೆಯ ಮಹತ್ವವನ್ನು ಸಾರುವ ಈ ಪೂಜೆಯು ಶ್ರೀಕೃಷ್ಣ ಮಠದ ಮಠೀಯ ಸಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.