-->
 ಅ.7:"ವಿಕಸಿತ ಭಾರತ ಸಂಕಲ್ಪ ಸಭೆ","ಸೇವಾ ಜ್ಯೋತಿ ಯಾತ್ರೆ"

ಅ.7:"ವಿಕಸಿತ ಭಾರತ ಸಂಕಲ್ಪ ಸಭೆ","ಸೇವಾ ಜ್ಯೋತಿ ಯಾತ್ರೆ"


ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ ಸಾರ್ಥಕ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸುವ ದಿನ ಅ.7ರಂದು 'ಸೇವಾ ಸಂಕಲ್ಪ ಅಭಿಯಾನ'ದ ಅಂಗವಾಗಿ "ವಿಕಸಿತ ಭಾರತ ಸಂಕಲ್ಪ ಸಭೆ" ಮತ್ತು "ಸೇವಾ ಜ್ಯೋತಿ ಯಾತ್ರೆ" ಕಾರ್ಯಕ್ರಮವು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ಗಂಟೆ 9ಕ್ಕೆ ಉಡುಪಿ ಅಜ್ಜರಕಾಡು ಪುರ ಭವನದಲ್ಲಿ ನಡೆಯಲಿದೆ.

ಬೆಳಿಗ್ಗೆ ಗಂಟೆ 9.30ಕ್ಕೆ "ವಿಕಸಿತ ಭಾರತ ಸಂಕಲ್ಪ ಸಭೆ" ನಡೆಯಲಿದ್ದು, 10.00 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು "ಸೇವಾ ಜ್ಯೋತಿ ಯಾತ್ರೆ" ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪುರ ಭವನದಲ್ಲಿ ಇದರ ನೇರ ಪ್ರಸಾರದ ಸಾಮೂಹಿಕ ವೀಕ್ಷಣೆ ನಡೆಯಲಿದೆ.

ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭಾಷಣದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜ್ಯೋತಿಯನ್ನು ಬೆಳಗಿಸಿ "ಸೇವಾ ಜ್ಯೋತಿ ಯಾತ್ರೆ" ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರು ಸಂಸದರು, ಶಾಸಕರು ಮತ್ತು ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ "ಸೇವಾ ಜ್ಯೋತಿ ಯಾತ್ರೆ" ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

"ಸೇವಾ ಜ್ಯೋತಿ" ಬೆಳಗಿದ ನಂತರ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ನೇತೃತ್ವದಲ್ಲಿ ಸಂಸದರು, ಶಾಸಕರು, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಸಮಾಗಮದೊಂದಿಗೆ ಉಡುಪಿ ಪುರ ಭವನದಿಂದ ಜೋಡುಕಟ್ಟೆಯ ವರೆಗೆ 'ಪಾದಯಾತ್ರೆ'ಯೊಂದಿಗೆ ಕಾರ್ಯಕ್ರಮ ಸಮಾಪನಗೊಳ್ಳಲಿದೆ.

"ಸೇವಾ ಜ್ಯೋತಿ ಯಾತ್ರೆ"ಯ ಪೂರ್ವಭಾವಿಯಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಅ.7 ಬುಧವಾರ ಬೆಳಿಗ್ಗೆ ಗಂಟೆ 8.30ಕ್ಕೆ ಟೈಗರ್ ಸರ್ಕಲ್ ಮಣಿಪಾಲ, ಬಲಾಯಿಪಾದೆ ಮತ್ತು ಅಂಬಾಗಿಲು ಕಡೆಗಳಿಂದ 'ವಾಹನ ಜಾಥಾ' ಹೊರಟು ಪುರ ಭವನವನ್ನು ತಲುಪಲಿದೆ.

ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಸಮಿತಿ/ಕಾರ್ಯಕಾರಿಣಿ ಸದಸ್ಯರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದು "ವಿಕಸಿತ ಭಾರತ ಸಂಕಲ್ಪ ಸಭೆ" ಮತ್ತು "ಸೇವಾ ಜ್ಯೋತಿ ಯಾತ್ರೆ"ಯನ್ನು ಯಶಸ್ವಿಗೊಳಿಸಬೇಕಾಗಿ 'ಸೇವಾ ಸಂಕಲ್ಪ ಅಭಿಯಾನ'ದ ಜಿಲ್ಲಾ ಸಂಚಾಲಕ ದಿನಕರ ಶೆಟ್ಟಿ ಹೆರ್ಗ ಮತ್ತು 'ಸೇವಾ ಜ್ಯೋತಿ ಯಾತ್ರೆ'ಯ ಜಿಲ್ಲಾ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article