-->
ಎಂಆರ್‌ಪಿಎಲ್‌: 16 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಎಂಆರ್‌ಪಿಎಲ್‌: 16 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ


ಕೇಂದ್ರ ಸಾರ್ವಜನಿಕ ವಲಯದ ಶೆಡ್ಯೂಲ್ ‘ಎ’ ಮಿನಿ ರತ್ನ ಸಂಸ್ಥೆಯಾಗಿರುವ ಎಂಆರ್‌ಪಿಎಲ್‌ನಲ್ಲಿ ನಿಗದಿತ ಅವಧಿಯ ಉದ್ಯೋಗ (PFTE) ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (MRPL) ಭಾರತೀಯ ತೈಲ ಮತ್ತು ಅನಿಲ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿದ್ದು, ONGCಯ ಅಂಗಸಂಸ್ಥೆಯಾಗಿದೆ. 

Uploading: 328678 of 328678 bytes uploaded.

ಹುದ್ದೆಗಳ ವಿವರ:

* ರಿಟೇಲ್ ಕನ್‌ಸ್ಟ್ರಕ್ಷನ್ ಎಂಜಿನಿಯರ್ / ರಿಟೇಲ್ ಎಂಜಿನಿಯರ್ – 10 ಹುದ್ದೆಗಳು

* ಟರ್ಮಿನಲ್ ಆಪರೇಷನ್ ಎಂಜಿನಿಯರ್ – 6 ಹುದ್ದೆಗಳು

ಒಟ್ಟು 16 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಹುದ್ದೆಗಳ ಮಟ್ಟ ಎಕ್ಸಿಕ್ಯೂಟಿವ್ ಲೆವೆಲ್ L1 ಆಗಿದೆ. ಅರ್ಜಿಗಳ ಪರಿಶೀಲನೆಯ ಬಳಿಕ ಅರ್ಹ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸೆಪ್ಟೆಂಬರ್ 30, 2026 ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅಕ್ಟೋಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 

ಆಸಕ್ತ ಹಾಗೂ ಅರ್ಹ ಭಾರತೀಯ ನಾಗರಿಕರು ಎಂಆರ್‌ಪಿಎಲ್‌ನ ಅಧಿಕೃತ ಕೆರಿಯರ್ಸ್ ಪುಟದಲ್ಲಿ ಪ್ರಕಟಿಸಿರುವ ವಿವರವಾದ ಅಧಿಸೂಚನೆ ಹಾಗೂ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ www.mrpl.co.in/careers 

Ads on article

Advertise in articles 1

advertising articles 2

Advertise under the article