ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷರಾಗಿ ನಟರಾಜ್ ಪ್ರಭು ಆಯ್ಕೆ
Tuesday, September 29, 2026
ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ನೂತನ ಅಧ್ಯಕ್ಷರಾಗಿ ಶ್ರೇಯಾ ಪ್ರಿಂಟರ್ಸ್ ಮಾಲಕ, ಉದ್ಯಮಿ ನಟರಾಜ್ ಪ್ರಭು ಆಯ್ಕೆಯಾಗಿದ್ದಾರೆ.
ಮಂಗಳವಾರ ಚೇಂಬರ್ ಟವರ್ ನಲ್ಲಿ ನಡೆದ ಚೇಂಬರ್ ನ 23ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಡಾ. ವಿಜಯೇಂದ್ರ ರಾವ್,
ಗೌರವ ಕಾರ್ಯದರ್ಶಿಯಾಗಿ ಸಮೀರ್ ಮೊಹಮ್ಮದ್, ಕೋಶಾಧಿಕಾರಿಯಾಗಿ ಕೆ. ವಿನೋದ್ ಪೈ, ಜೊತೆ ಕಾರ್ಯದರ್ಶಿಗಳಾಗಿ ಕೆ. ಅನೀಶ್ ಪೈ ಹಾಗೂ ಅವಿನಾಶ್ ಪೂಜಾರಿ, ನಿರ್ದೇಶಕರುಗಳಾಗಿ ಸುಭಾಸ್ ಎಂ.ಕಾಮತ್, ಎಂ. ನಾಗರಾಜ್ ಹೆಬ್ಬಾರ್,
ಪ್ರಕಾಶ್ಚಂದ್ರ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಆನಂದ ಕಾರ್ನಾಡ್, ಶ್ರೀಪತಿ ಭಟ್, ವಾಲ್ಟರ್ ಸಾಲ್ಡಾನ್ನ, ಅತುಲ್ ಭಕ್ತ, ಚಂದನ್ ಶೆಟ್ಟಿಗಾರ್ ಹಾಗೂ ಸಂತೋಷ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಂತೋಷ್ ಪ್ರಭು ಕರ್ತವ್ಯ ನಿರ್ವಹಿಸಿದರು. FKCCI ಕಾರ್ಯಕಾರಿ ಸಮಿತಿ ಸದಸ್ಯ ಅಂಡಾರು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಕಳೆದ ಸಾಲಿನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್ ಸ್ವಾಗತಿಸಿ, ನಿರ್ಗಮನ ಗೌರವ ಕಾರ್ಯದರ್ಶಿ ಡಾ. ವಿಜಯೇಂದ್ರ ರಾವ್ ವಂದಿಸಿದರು.