-->
ವಾರಕ್ಕೆ 5 ದಿನಗಳ ಕೆ‌ಲಸ ಬೇಡಿಕೆ: ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ವಾರಕ್ಕೆ 5 ದಿನಗಳ ಕೆ‌ಲಸ ಬೇಡಿಕೆ: ಬ್ಯಾಂಕ್‌ ಮುಷ್ಕರ ಮುಂದೂಡಿಕೆ


ಐದು ದಿನಗಳ ಬ್ಯಾಂಕಿಂಗ್‌ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್‌ (UFBU) ಕರೆ ನೀಡಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಇದರೊಂದಿಗೆ ಗ್ರಾಹಕರು ಸಂಕಷ್ಟಕ್ಕೊಳಗಾಗುವುದು ತಪ್ಪಿದಂತಾಗಿದೆ. 


ನಿನ್ನೆ (ಭಾನುವಾರ) ರಾತ್ರಿ 9.30ಕ್ಕೆ ಭಾರತೀಯ ಬ್ಯಾಂಕ್‌ಗಳ ಸಂಘ (IBA) ಹಾಗೂ UFBU ನಡುವೆ ನಡೆದ ತುರ್ತು ಸಭೆಯಲ್ಲಿ ಹಲವು ಮಹತ್ವದ ಒಪ್ಪಂದಗಳಿಗೆ ಬರಲಾಗಿದೆ. ಎಲ್ಲಾ ಶನಿವಾರಗಳನ್ನು ಬ್ಯಾಂಕ್‌ ರಜಾದಿನಗಳನ್ನಾಗಿ ಮಾಡುವ ಬೇಡಿಕೆ ಪರಿಶೀಲಿಸಲು IBA–UFBU ಜಂಟಿ ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸಮಿತಿಯು ಎಲ್ಲ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಪಾಲುದಾರರೊಂದಿಗೆ (stakeholders) ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಲಿದೆ.

ಇದಲ್ಲದೆ, ಸ್ಕೇಲ್‌ IV ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳ ಪಿಎಲ್‌ಐ (PLI) ಯೋಜನೆಯಲ್ಲಿ ಬದಲಾವಣೆ ಕುರಿತು ಮಾತುಕತೆ ಆರಂಭಿಸಲು ಹಾಗೂ 2024ರ ಮಾರ್ಚ್‌ 8ರ ಸಭೆಯ ನಡಾವಳಿಯಲ್ಲಿ ಬಾಕಿ ಉಳಿದಿರುವ ಇತರ ವಿಷಯಗಳನ್ನು ಶೀಘ್ರ ಇತ್ಯರ್ಥಪಡಿಸಲು ಚರ್ಚೆ ನಡೆಸಲು ಒಪ್ಪಲಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ UFBU ತನ್ನ ಪ್ರತಿಭಟನೆ ಮತ್ತು ಮುಷ್ಕರವನ್ನು ಸದ್ಯಕ್ಕೆ ಮುಂದೂಡಿದೆ.

ಐದು ದಿನಗಳ ಬ್ಯಾಂಕಿಂಗ್‌ ಬೇಡಿಕೆ ಕುರಿತು ಉನ್ನತ ಮಟ್ಟದ ಸಮಿತಿಯಲ್ಲಿ UFBU ಪ್ರತಿನಿಧಿಗಳೂ ಭಾಗವಹಿಸಲಿದ್ದು, ಎಲ್ಲ ಸಂಬಂಧಿತರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್‌ ಕಾನ್ಫೆಡರೇಷನ್ ಅಧ್ಯಕ್ಷ ಆರ್. ಶೇಖರನ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article