-->
ಮಾಣಿ ಫ್ಲೈಓವರ್ ಬಳಿ ಆಲ್ಟೋ-ಗೂಡ್ಸ್ ಟೆಂಪೊ ಡಿಕ್ಕಿ: ಉಮ್ರಾ ತರಗತಿಯಿಂದ ಮರಳುತ್ತಿದ್ದ ಮಹಿಳೆ ಸಾವು

ಮಾಣಿ ಫ್ಲೈಓವರ್ ಬಳಿ ಆಲ್ಟೋ-ಗೂಡ್ಸ್ ಟೆಂಪೊ ಡಿಕ್ಕಿ: ಉಮ್ರಾ ತರಗತಿಯಿಂದ ಮರಳುತ್ತಿದ್ದ ಮಹಿಳೆ ಸಾವು




ಆಲ್ಟೋ ಕಾರು ಮತ್ತು ಗೂಡ್ಸ್ ಟೆಂಪೋ ಪರಸ್ಪರ ಡಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟು, ಇತರ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು (ಸೋಮವಾರ) ಬೆಳಗ್ಗೆ 6 ಗಂಟೆ ಸುಮಾರಿಗೆ ಮಾಣಿ ಫ್ಲೈ ಓವರ್ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಮಡಿಕೇರಿ ನಿವಾಸಿ ನಫೀಸಾ (55) ಎಂದು ಗುರುತಿಸಲಾಗಿದೆ. ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಚಾಲಕ ಆಲ್ಲೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಮಂಗಳೂರು-ಮಡಿಕೇರಿ-ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆ ಹಾಗೂ ಪ್ರವೇಶ ಮಾರ್ಗದ ಅವೈಜ್ಞಾನಿಕ ವಿನ್ಯಾಸವೇ ಈ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ. 

ಬೇರೆ ಊರುಗಳಿಂದ ಬರುವ ವಾಹನ ಚಾಲಕರಿಗೆ ಸರ್ವಿಸ್ ರಸ್ತೆ ಇರುವ ಬಗ್ಗೆ ಗಮನಕ್ಕೆ ಬಾರದೆ ಗೊಂದಲ ಉಂಟಾಗುತ್ತಿದ್ದು, ಸೂಚನಾ ಫಲಕಗಳ ಕೊರತೆಯೂ ಅಪಘಾತಗಳಿಗೆ ಕಾರಣವಾಗುತ್ತಿದೆ.

Ads on article

Advertise in articles 1

advertising articles 2

Advertise under the article