-->
ಉಡುಪಿ ಹನುಮಾನ್ ಪೆಟ್ರೋಲ್ ಬಂಕ್ ಬಳಿಯಿಂದ ಕಳವಾಗಿದ್ದ ಶ್ರೀ ದುರ್ಗಾಂಬಾ ಬಸ್ ಬಾಳೆಗುಂಡಿ ಬಳಿ ಪತ್ತೆ

ಉಡುಪಿ ಹನುಮಾನ್ ಪೆಟ್ರೋಲ್ ಬಂಕ್ ಬಳಿಯಿಂದ ಕಳವಾಗಿದ್ದ ಶ್ರೀ ದುರ್ಗಾಂಬಾ ಬಸ್ ಬಾಳೆಗುಂಡಿ ಬಳಿ ಪತ್ತೆ


ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್‌ ಬಳಿ ನಿಲ್ಲಿಸಲಾಗಿದ್ದ ಶ್ರೀ ದುರ್ಗಾಂಬಾ ಬಸ್‌ವೊಂದು ಕಳವಾಗಿದ್ದು, ಇದೀಗ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಗುಂಡಿ ಸಮೀಪ ಪತ್ತೆಯಾಗಿದೆ.

 ಕೃಷ್ಣ (51) ಅವರು ಶ್ರೀ ದುರ್ಗಾಂಬಾ ಬಸ್‌ನ ನಿರ್ವಾಹಕರಾಗಿದ್ದು, ರಾಯಿನ್ ಉಚ್ಚಿಲ ಅವರು ಚಾಲಕರಾಗಿದ್ದಾರೆ. ಸೆ.28ರಂದು ರಾತ್ರಿ ಸುಮಾರು 9.48ಕ್ಕೆ ಬಸ್‌ನ್ನು ಹನುಮಾನ್ ಪೆಟ್ರೋಲ್ ಬಂಕ್‌ನ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಕೃಷ್ಣ ಅವರು ಚಾಲಕ ರಾಯಿನ್ ಅವರೊಂದಿಗೆ ಸ್ಕೂಟರ್‌ನಲ್ಲಿ ಅಲ್ಲಿಂದ ತೆರಳಿದ್ದರು.

ಸೆ.29ರಂದು ಬೆಳಗ್ಗೆ ಎಂದಿನಂತೆ ಬಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಬಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಬಸ್ ಕಳವಾಗಿರುವ ಕುರಿತು ದೂರು ದಾಖಲಿಸಲಾಗಿತ್ತು.

ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಕಳವಾಗಿದ್ದ ಬಸ್ ಶಿರ್ವ ಠಾಣಾ ವ್ಯಾಪ್ತಿಯ ಬಾಳೆಗುಂಡಿ ಸಮೀಪ ಪತ್ತೆಯಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಬಸ್‌ನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಸ್ ಕಳವು ಮಾಡಿದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article