-->
 ‘ರಾಜ್ ಫಿಶ್‌ಮಿಲ್’ ವತಿಯಿಂದ ಉಡುಪಿ ಪೊಲೀಸ್ ಇಲಾಖೆಗೆ ಬೊಲೆರೋ ಕೊಡುಗೆ

‘ರಾಜ್ ಫಿಶ್‌ಮಿಲ್’ ವತಿಯಿಂದ ಉಡುಪಿ ಪೊಲೀಸ್ ಇಲಾಖೆಗೆ ಬೊಲೆರೋ ಕೊಡುಗೆ


ಉಡುಪಿ ಜಿಲ್ಲಾ ಪೊಲೀಸರ ಅಧಿಕೃತ ಕರ್ತವ್ಯಗಳು ಹಾಗೂ ಕಾರ್ಯಾಚರಣೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಒಡೆತನದ ‘ರಾಜ್ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ’ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೊ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.


Malpe Manipal Ventures Pvt. Ltd ಸಂಸ್ಥೆಯ ನಿರ್ದೇಶಕಿ ಸುಪ್ರಿಯಾ ಪ್ರಮೋದ್ ರಾಜ್ ಅವರು ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ಬೊಲೆರೊ ವಾಹನದ ಕೀಯನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸುಪ್ರಿಯಾ ಪ್ರಮೋದ್ ರಾಜ್ ಅವರನ್ನು ಗೌರವಿಸಲಾಯಿತು. ಪ್ರಮೋದ್ ಮಧ್ವರಾಜ್ ಅವರ ಪುತ್ರಿ ಪ್ರತ್ಯಕ್ಷಾ ಪ್ರಮೋದ್ ರಾಜ್, ಡಿಎಆರ್‌ನ ಪೊಲೀಸ್ ಉಪಾಧೀಕ್ಷಕ ತಿಮ್ಮಪ್ಪ ಗೌಡ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ರವಿ ಕುಮಾರ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article